ಮಿಯಾ, ಪಾಕಿಸ್ತಾನಿ ಅನ್ನೋದು ಧಾರ್ಮಿಕ ಭಾವನೆಗೆ ಹಾನಿ ಅಲ್ಲ

| Published : Mar 05 2025, 12:30 AM IST

ಸಾರಾಂಶ

ನವದೆಹಲಿ: ಯಾರಿಗೇ ಆದರೂ ''ಮಿಯಾ-ತಿಯಾ'', ''ಪಾಕಿಸ್ತಾನಿ'' ಎಂದು ಕರೆಯುವುದು ತಪ್ಪಾದರೂ ಅದು ಕ್ರಿಮಿನಲ್‌ ಅಪರಾಧ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪದವಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ನವದೆಹಲಿ: ಯಾರಿಗೇ ಆದರೂ ''''''''ಮಿಯಾ-ತಿಯಾ'''''''', ''''''''ಪಾಕಿಸ್ತಾನಿ'''''''' ಎಂದು ಕರೆಯುವುದು ತಪ್ಪಾದರೂ ಅದು ಕ್ರಿಮಿನಲ್‌ ಅಪರಾಧ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪದವಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಹರಿನಂದನ್‌ ಸಿಂಗ್‌ ಎಂಬ 80 ವರ್ಷದ ವ್ಯಕ್ತಿ ವಿರುದ್ಧ ಉರ್ದು ಅನುವಾದಕ ಹಾಗೂ ಜಾರ್ಖಂಡ್‌ನ ವಿಭಾಗೀಯ ಕಚೇರಿಯ ಮಾಹಿತಿ ಹಕ್ಕು ವಿಭಾಗದ ಕ್ಲರ್ಕ್‌ವೊಬ್ಬರು ದಾಖಲಿಸಿದ್ದ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯಪಟ್ಟಿದೆ. ಮಾಹಿತಿ ಹಕ್ಕು ಕಾಯ್ದೆಅಡಿ ಅರ್ಜಿ ವಿಚಾರಕ್ಕೆ ಸಂಬಂಧಿಸಿ ಕಚೇರಿಗೆ ಬಂದಿದ್ದ ಹರಿನಂದನ್‌ ಸಿಂಗ್ ಮಿಯಾ-ತಿಯಾ, ಪಾಕಿಸ್ತಾನಿ ಎಂದು ಬೈಯ್ಯುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾ.ಸತೀಶ್‌ ಚಂದ್ರ ಶರ್ಮಾ ಅವರ ಪೀಠವು, ಈ ರೀತಿಯ ಪದ ಬಳಕೆ ಖಂಡಿತವಾಗಿಯೂ ಸರಿಯಲ್ಲ. ಆದರೆ, ಇದು ಕ್ರಿಮಿನಲ್‌ ಅಪರಾಧವಲ್ಲ, ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುವುದೂ ಇಲ್ಲ. ಈ ರೀತಿಯ ಪದ ಬಳಕೆಗೆ ಯಾರನ್ನೇ ಆದರೂ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.