ಸಾರಾಂಶ
ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಕಲಿಯದ, ಮಾತನಾಡದ ಉತ್ತರ ಭಾರತದವರ ಧೋರಣೆಗಳ ಬಗ್ಗೆ ಆಗೀಗ ಘರ್ಷಣೆಗಳು ಉಂಟಾಗುತ್ತಿವೆ. ಇದರ ನಡುವೆ ಬಳಸಿದ ಕಾರುಗಳ ಆನ್‌ಲೈನ್ ಮಾರುಕಟ್ಟೆಯಾದ ಕಾರ್ಸ್-24ನ ನೇಮಕಾತಿ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.
ನವದೆಹಲಿ: ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಕಲಿಯದ, ಮಾತನಾಡದ ಉತ್ತರ ಭಾರತದವರ ಧೋರಣೆಗಳ ಬಗ್ಗೆ ಆಗೀಗ ಘರ್ಷಣೆಗಳು ಉಂಟಾಗುತ್ತಿವೆ. ಇದರ ನಡುವೆ ಬಳಸಿದ ಕಾರುಗಳ ಆನ್‌ಲೈನ್ ಮಾರುಕಟ್ಟೆಯಾದ ಕಾರ್ಸ್-24ನ ನೇಮಕಾತಿ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.
ಕಾರ್ಸ್24ನ ಸಿಇಒ ವಿಕ್ರಂ ಚೋಪ್ರಾ ಸಾಮಾಜಿಕ ಕಾಲತಾಣದಲ್ಲಿ ಮಾಡಿದ ಪೋಸ್ಟ್‌ನಲ್ಲಿ, ‘ಬೆಂಗಳೂರಿನಲ್ಲಿ ಇಷ್ಟು ವರ್ಷ ವಾಸವಿದ್ದರೂ ಕನ್ನಡ ಬರುವುದಿಲ್ಲವೇ? ಪರವಾಗಿಲ್ಲ, ದಿಲ್ಲಿಗೆ ಬನ್ನಿ. ನಾವು ಮನೆಯ ಹತ್ತಿರವೇ ಇರಬಯಸುವ ಎಂಜಿನಿಯರ್‌ಗಳಿಗಾಗಿ ಹುಡುಕುತ್ತಿದ್ದೇವೆ. ದೆಹಲಿ ಹಾಗೂ ರಾಷ್ಟ್ರರಾಜಧಾನಿ ವಲಯ ಉತ್ತಮ ಎಂದು ಹೇಳುತ್ತಿಲ್ಲ. ಆದರೆ ಅದೇ ಸತ್ಯ’ ಎಂದು ಬರೆಯಲಾಗಿದೆ.ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಭಾಷಾ ಭೇದವನ್ನು ಪೋಷಿಸಬೇಡಿ ಎಂಬ ಸಲಹೆ ನೀಡಿದ್ದಾರೆ. ಕೆಲವರು, ‘ನಿಮ್ಮ ವಿಶೇಷತೆಗಳನ್ನು ವರ್ಣಿಸಲು ಇದಕ್ಕಿಂತಲೂ ಉತ್ತಮ ಮಾರ್ಗಗಳಿವೆ’ ಎಂದಿದ್ದಾರೆ.