ಸಾರಾಂಶ
ಸೋಮವಾರ ಸ್ಫೋಟಗೊಂಡ ಕಾರು ಅಂದು 11 ತಾಸುಗಳ ಕಾಲ ಎಲ್ಲಿ ಸಂಚರಿಸಿತ್ತು ಎಂಬ ಸಿಸಿಟೀವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಬೆಳಗ್ಗೆ 7.30ರಿಂದ ಸ್ಫೋಟ ಸಂಭವಿಸಿದ ಸಂಜೆ 6.52ರವರೆಗಿನ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ನಗರದ ಅನೇಕ ಭಾಗಗಳನ್ನು ಕಾರು ಸುತ್ತಿದೆ.
- ಹರ್ಯಾಣದಲ್ಲಿ ಆರಂಭವಾಗಿ ಕೆಂಪುಕೋಟೆಗೆ ಆಗಮನ
- 3 ತಾಸುಗಳ ಕಾಲ ಕೆಂಪುಕೋಟೆ ಪಾರ್ಕಿಂಗ್‌ನಲ್ಲಿ ವಾಸ- ಅಷ್ಟು ಗಂಟೆ ಹೊತ್ತು ಕಾರಿನಲ್ಲಿ ಕುಳಿತಿದ್ದ ಶಂಕಿತ ಉಗ್ರ
- ಶಂಕಿತ ನೀಲಿ, ಕಪ್ಪು ಬಣ್ಣದ ಟೀಶರ್ಟ್ ಧರಿಸಿದ್ದು ಸೆರೆನವದೆಹಲಿ: ಸೋಮವಾರ ಸ್ಫೋಟಗೊಂಡ ಕಾರು ಅಂದು 11 ತಾಸುಗಳ ಕಾಲ ಎಲ್ಲಿ ಸಂಚರಿಸಿತ್ತು ಎಂಬ ಸಿಸಿಟೀವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಬೆಳಗ್ಗೆ 7.30ರಿಂದ ಸ್ಫೋಟ ಸಂಭವಿಸಿದ ಸಂಜೆ 6.52ರವರೆಗಿನ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ನಗರದ ಅನೇಕ ಭಾಗಗಳನ್ನು ಕಾರು ಸುತ್ತಿದೆ.ಬೆಳಗ್ಗೆ 7.30ಕ್ಕೆ ಹರ್ಯಾಣದ ಫರೀದಾಬಾದ್‌ನಲ್ಲಿನ ಏಷ್ಯನ್ ಆಸ್ಪತ್ರೆ ಬಳಿ ಕಾಣಿಸಿಕೊಂಡಿದ್ದ ಹ್ಯುಂಡೈ ಐ20 ಕಾರು, 8.13ಕ್ಕೆ ಬಾದರ್‌ಪುರ ಟೋಲ್‌ಪ್ಲಾಜಾ ಮೂಲಕ ದೆಹಲಿ ಪ್ರವೇಶಿಸಿದೆ. 8.20ಕ್ಕೆ ಓಕ್ಲಾ ಕೈಗಾರಿಕಾ ಪ್ರದೇಶದ ಬಳಿ ಪೆಟ್ರೋಲ್ ಪಂಪ್ ಬಳಿ ಸಂಚರಿಸಿದೆ. ನಂತರ 3.19ಕ್ಕೆ ಕೆಂಪುಕೋಟೆಯ ಪಾರ್ಕಿಂಗ್ ತಾಣಕ್ಕೆ ಕಾರು ಪ್ರವೇಶಿಸಿದೆ.
3 ತಾಸು ಕೆಂಪುಕೋಟೆ ಪಾರ್ಕಿಂಗ್‌ನಲ್ಲಿ ನಿಲುಗಡೆ:3.19ಕ್ಕೆ ಕೆಂಪುಕೋಟೆ ಪಾರ್ಕಿಂಗ್‌ಗೆ ಬಂದ ಕಾರು ಸತತ 3 ತಾಸುಗಳ ಕಾಲ ಅಲ್ಲಿಯೇ ನಿಂತಿತ್ತು. ಕಿಟಕಿಯಿಂದ ಕೇವಲ ಶಂಕಿತ ದಾಳಿಕೋರ ಡಾ। ಉಮರ್‌ನ ಕೈ ಮಾತ್ರ ಕಾಣಿಸಿದ್ದು, ಮತ್ತೊಂದು ಕ್ಯಾಮೆರಾದಲ್ಲಿ ಆತ ನೀಲಿ ಮತ್ತು ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದು ಗೊತ್ತಾಗಿದೆ. 3 ತಾಸುಗಳು ಕಾಲ ಆತ ಕಾರಿನಿಂದ ಹೊರಬಾರದೆ ಒಳಗೆಯೇ ಕುಳಿತುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.2 ವಾರ ಮುನ್ನ ಎಮಿಷನ್ ಟೆಸ್ಟ್:ಶಂಕಿತರು 2 ವಾರಗಳ ಮುನ್ನ ಕಾರನ್ನು ಮಾಲಿನ್ಯ ತಪಾಸಣಾ ಪರೀಕ್ಷೆಗೆ ಕೊಂಡೊಯ್ದಿದ್ದು, ಸಿಸಿಟೀವಿ ದೃಶ್ಯ ಪರಿಶೀಲನೆ ವೇಳೆ ಗೊತ್ತಾಗಿದೆ. ಒಂದು ವೇಳೆ ಮಾರ್ಗ ಮಧ್ಯದಲ್ಲಿ ಪೊಲೀಸರು ವಾಹನವನ್ನು ತಡೆದರೆ, ಎಲ್ಲ ದಾಖಲೆಗಳು ತೋರಿಸುವುದಕ್ಕೆ ಬೇಕಾಗುತ್ತದೆ ಎಂಬ ಕಾರಣಕ್ಕೆ ಈ ಪರೀಕ್ಷೆ ಮಾಡಿಸಿರಬಹುದು ಎನ್ನಲಾಗಿದೆ. ಅ.29ರ ಸಿಸಿಟೀವಿ ದೃಶ್ಯದಲ್ಲಿ ಸೆರೆಯಾಗಿದೆ.;Resize=(128,128))
;Resize=(128,128))
;Resize=(128,128))