ಆಂಧ್ರದಲ್ಲಿ ಟ್ರಕ್‌ಗೆ ಕಾರು ಡಿಕ್ಕಿ: ನವದಂಪತಿ ಸೇರಿ 5 ಕುಟುಂಬಸ್ಥರು ಸಾವು

| Published : Mar 07 2024, 01:49 AM IST

ಆಂಧ್ರದಲ್ಲಿ ಟ್ರಕ್‌ಗೆ ಕಾರು ಡಿಕ್ಕಿ: ನವದಂಪತಿ ಸೇರಿ 5 ಕುಟುಂಬಸ್ಥರು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ನಂದ್ಯಾಲ್‌ ಜಿಲ್ಲೆಯಲ್ಲಿ ಟ್ರಕ್‌ವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿಯೂ ಸೇರಿದಂತೆ ಕಾರಿನಲ್ಲಿದ್ದ ಐವರು ಕುಟುಂಬಸ್ಥರು ಸಾವನ್ನಪ್ಪಿದ್ದಾರೆ.

ನಲ್ಲಗಟ್ಲ(ಆಂಧ್ರಪ್ರದೇಶ): ರಸ್ತೆ ಬದಿಯಲ್ಲಿ ನಿಂತ ಟ್ರಕ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನವದಂಪತಿಯೂ ಸೇರಿದಂತೆ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ನಂದ್ಯಾಲ್‌ ಜಿಲ್ಲೆಯ ನಲ್ಲಗಟ್ಲ ಗ್ರಾಮದಲ್ಲಿ ನಡೆದಿದೆ.

ಟ್ರಕ್‌ ಡ್ರೈವರ್‌ ಶೌಚಾಲಯಕ್ಕೆ ತೆರಳುವ ಸಲುವಾಗಿ ವಾಹನವನ್ನು ರಸ್ತೆ ಬದಿ ನಿಲ್ಲಿಸಿದ್ದಾಗ ಹಿಂದಿನಿಂದ ರಭಸವಾಗಿ ಬಂದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಆಗ ಫೆ.29ರಂದು ಹಸೆಮಣೆಯೇರಿದ್ದ ನವದಂಪತಿಯೂ ಸೇರಿದಂತೆ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಕುಟುಂಬಸ್ಥರು ತಿರುಪತಿ ಬಳಿಯ ದೇಗುಲವೊಂದಕ್ಕೆ ತೆರಳಿ ಹಿಂದಿರುಗುವ ವೇಳೆ ಮುಂಜಾನೆ 5:15ರ ಸುಮಾರಿಗೆ ಘಟನೆ ಸಂಭವಿಸಿದ್ದು, ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.