ಸಾರಾಂಶ
ಪಿಟಿಐ ನವದೆಹಲಿ: 6,600 ಕೋಟಿ ರು. ಕ್ರಿಪ್ಟೋ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳ 60 ಸ್ಥಳಗಳಲ್ಲಿ ಸಿಬಿಐ ಮಂಗಳವಾರ ದಾಳಿ ನಡೆಸಿದೆ.
ಪಿಟಿಐ ನವದೆಹಲಿ: 6,600 ಕೋಟಿ ರು. ಕ್ರಿಪ್ಟೋ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳ 60 ಸ್ಥಳಗಳಲ್ಲಿ ಸಿಬಿಐ ಮಂಗಳವಾರ ದಾಳಿ ನಡೆಸಿದೆ.
ಬೆಂಗಳೂರು ಮಾತ್ರವಲ್ಲ, ಕೊಲ್ಹಾಪುರ, ದಿಲ್ಲಿ, ಪುಣೆ, ಚಂಡೀಗಢ, ನಾಂದೇಡದಲ್ಲೂ ದಾಳಿ ನಡೆದಿದೆ ಎಂದ ಸಿಬಿಐ ವಕ್ತಾರರು ಹೇಳಿದ್ದಾರೆ.2015ರಲ್ಲಿ www.gainbitcoin.com ಎಂಬ ಬಿಟ್‌ಕಾಯಿನ್ ವೆಬ್‌ಸೈಟ್ ಆರಂಭಿಸಿದ್ದ ಅಮಿತ್ ಭಾರದ್ವಾಜ್ (ಈಗ ಈತ ನಿಧನ ಆಗಿದ್ದಾನೆ) ಹಾಗೂ ಆತನ ಸೋದರ ಅಜಯ ಭಾರದ್ವಾಜ್, ಡಿಜಿಟಲ್ ಕರೆನ್ಸಿ ಖರೀದಿಸಿ ಹೂಡಿಕೆ ಮಾಡಿದರೆ ಶೇ.10ರಷ್ಟು ಮಾಸಿಕ ಬಡ್ಡಿಯೊಂದಿಗೆ ಹಣ ನೀಡುವ ಆಮಿಷ ಒಡ್ಡಿದ್ದರು. 2017ರವರೆಗೆ ಅಂದುಕೊಂಡಂತೆ ನಡೆದು ಆಮೇಲೆ ಹಣ ನೀಡದೇ ವಂಚಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.
ಈ ಜಾಲ ದೊಡ್ಡದಾಗಿದ್ದು, ದೇಶದ ಹಲವೆಡೆ ವ್ಯಾಪಿಸಿದೆ. ಹೀಗಾಗಿ ದಾಳಿ ನಡೆಸಿ ಕ್ರಿಪ್ಟೋ ವ್ಯಾಲೆಟ್, ಎಲೆಕ್ಟ್ರಾನಿಕ್ ಸಾಧನ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.