300 ರು. ಉಜ್ವಲಾ ಎಲ್‌ಪಿಜಿ ಸಬ್ಸಿಡಿ 1 ವರ್ಷ ಮುಂದುವರಿಕೆ: ಸಂಪುಟ ಅಸ್ತು

| Published : Mar 08 2024, 01:48 AM IST

300 ರು. ಉಜ್ವಲಾ ಎಲ್‌ಪಿಜಿ ಸಬ್ಸಿಡಿ 1 ವರ್ಷ ಮುಂದುವರಿಕೆ: ಸಂಪುಟ ಅಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ಬಡವರಿಗೆ ಎಲ್‌ಪಿಜಿ ಸಿಲಿಂಡರ್‌ಗೆ ನೀಡುವ 300 ರು. ಉಜ್ವಲಾ ಸಬ್ಸಿಡಿಯನ್ನು ಮತ್ತೊಂದು ವರ್ಷ ಮುಂದುವರೆಸುವುದಾಗಿ ಕೇಂದ್ರ ಸರ್ಕಾರ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.

ನವದೆಹಲಿ: ಉಜ್ವಲಾ ಯೋಜನೆ ಅಡಿಯ 300 ರು. ಎಲ್‌ಪಿಜಿ ಸಬ್ಸಿಡಿ 1 ವರ್ಷ ಮುಂದುವರಿಸಲು (2024-25ನೇ ಸಾಲಿಗೆ) ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.ಇದರಡಿ ಫಲಾನುಭವಿಗಳಿಗೆ ಪ್ರತಿ ವರ್ಷಕ್ಕೆ 12 ರೀಫಿಲ್‌ಗಳಿಗೆ ತಲಾ 300 ರು. ಸಬ್ಸಿಡಿ ದೊರಕುತ್ತದೆ.

ಮಾರ್ಚ್ 1, 2024ರ ಅಂಕಿ ಅಂಶದ ಪ್ರಕಾರ 10.27 ಕೋಟಿಗೂ ಹೆಚ್ಚು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಫಲಾನುಭವಿಗಳಿದ್ದಾರೆ.

ಯೋಜನೆಯನ್ನು 1 ವರ್ಷ ಮುಂದುವರಿಸಿರುವ ಕಾರಣ 2024-25ರ ಆರ್ಥಿಕ ವರ್ಷಕ್ಕೆ ಒಟ್ಟು 12,000 ರು. ಸಬ್ಸಿಡಿಯನ್ನು ಸರ್ಕಾರ ನೀಡಲಿದೆ.

ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.