23 ಅಪಾಯಕಾರಿ ಸಾಕು ನಾಯಿ ತಳಿಗಳಿಗೆ ನಿಷೇಧ

| Published : Mar 14 2024, 02:06 AM IST

ಸಾರಾಂಶ

ಸಾಕುನಾಯಿ ದಾಳಿಯಿಂದ ಸಾವು ಹೆಚ್ಚುತ್ತಿದ್ದ ಹಿನ್ನೆಲೆ ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.

ನವದೆಹಲಿ: ಸಾಕುನಾಯಿಗಳು ದಾಳಿ ಮಾಡಿ ನಾಗರಿಕರು ಸಾವನ್ನಪ್ಪುತ್ತಿದ್ದ ಸಂಖ್ಯೆ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಮುಖ 23 ನಾಯಿ ತಳಿಗಳ ಮಾರಾಟಕ್ಕೆ ನಿಷೇಧ ಹೇರಿದೆ. ಈ ಕುರಿತು ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಅಲ್ಲದೆ ಪ್ರಸ್ತುತ ಈ ತಳಿಯ ನಾಯಿ ಸಾಕಿರುವವರು ಅವುಗಳಿಗೆ ಗರ್ಭನಿರೋಧಕ ಚಿಕಿತ್ಸೆಯನ್ನು ಕಡ್ಡಾಯವಾಗಿ ಕೊಡಿಸಬೇಕೆಂದು ಸೂಚಿಸಿದೆ. ನಿಷೇಧಕ್ಕೊಳಗಾದ ನಾಯಿ ತಳಿಗಳು:

ಪಿಟ್‌ಬುಲ್‌ ಟೆರಿಯರ್‌, ತೋಸಾ ಇನು, ಅಮೆರಿಕನ್‌ ಸ್ಟಾಫೋರ್ಡ್‌ಶೈರ್‌ ಟೆರಿಯರ್‌, ಫಿಲಾ ಬ್ರೆಸಿಲೈರೋ, ದೋಗೋ ಅರ್ಜೆಂಟಿನೊ, ಅಮೆರಿಕನ್‌ ಬುಲ್‌ಡಾಗ್‌, ಬೋಯರ್‌ಬೋಯಲ್‌ ಕಂಗಾಲ್‌, ಮಧ್ಯ ಏಷ್ಯಾದ ಶೆಫರ್ಡ್‌, ಕಕೇಷಿಯನ್‌ ಶೆಫರ್ಡ್‌, ದಕ್ಷಿಣ ರಷ್ಯಾದ ಶೇಫರ್ಡ್‌, ಟಾರ್ನ್‌ಜಕ್‌, ಸರ್ಪ್ಲಾನಿನಕ್‌, ಜಪಾನಿನ ತೋಸಾ ಮತ್ತು ಅಕಿತಾ, ಮಸ್ತಿಫ್‌, ಟೆರಿಯರ್‌, ರೊಡೇಶಿಯನ್‌ ರಿಡ್ಜ್‌ಬ್ಯಾಕ್‌, ವೂಲ್ಫ್‌ ಡಾಗ್ಸ್‌, ಕೆನೆರಿಯೊ, ಅಕ್‌ಬಾಶ್‌, ಮಾಸ್ಕೊ ಗಾರ್ಡ್‌, ಕೇನ್‌ ಕೊರ್ಸೊ ಮತ್ತು ಬಂಡಾಗ್‌.