ಭಾರತೀಯ ಮುಸ್ಲಿಮರು ಚಿಂತೆ ಪಡಬೇಕಿಲ್ಲ: ಮೋದಿ ಸರ್ಕಾರ

| Published : Mar 13 2024, 02:04 AM IST

ಸಾರಾಂಶ

ಸಿಎಎ ಜಾರಿ ಹಿನ್ನೆಲೆಯಲ್ಲಿ ಮುಸ್ಲಿಮರು ಆತಂಕ ಪಡಬೇಕಿಲ್ಲ. ಇದರಿಂದ ಯಾರ ಪೌರತ್ವವನ್ನೂ ಕಸಿಯಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ನವದೆಹಲಿ: ಕೇಂದ್ರ ಸರ್ಕಾರ ಜಾರಿ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ-2019 ಯಾವುದೇ ಭಾರತೀಯ ಮುಸ್ಲಿಮರಿಗೂ ತೊಂದರೆ ಕೊಡುವುದಿಲ್ಲ. ಅವರ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಆದ್ದರಿಂದ ಭಾರತೀಯ ಮುಸ್ಲಿಮರು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟೀಕರಣ ನೀಡಿದೆ.

ಮಂಗಳವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯ,‘ಸಿಎಎ ಯಾವುದೇ ಭಾರತೀಯ ಮುಸ್ಲಿಮರಿಗೂ ದಾಖಲೆಗಳನ್ನು ಕೇಳುವುದಿಲ್ಲ. ಭಾರತೀಯ ಮುಸ್ಲಿಮರು ಹಿಂದೂಗಳಂತೆ ಎಲ್ಲ ಸೌಕರ್ಯಗಳನ್ನು ಅನುಭವಿಸಬಹುದು. ಈ ಕಾಯ್ದೆ ಅಡಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ತುಳಿತಕ್ಕೊಳಗಾಗಿದ್ದ ಅಲ್ಲಿನ ಅಲ್ಪಸಂಖ್ಯಾತರಿಗೆ ಭಾರತದ ನಾಗರಿಕತ್ವವನ್ನು ನೀಡುತ್ತದೆ’ ಎಂದು ಸ್ಪಷ್ಟನೆ ನೀಡಿದೆ.