ಕ್ವಿಂಟಾಲ್ ಗೋಧಿಗೆ 150 ರು.ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ
KannadaprabhaNewsNetwork | Published : Oct 19 2023, 12:45 AM IST
ಕ್ವಿಂಟಾಲ್ ಗೋಧಿಗೆ 150 ರು.ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ
ಸಾರಾಂಶ
ದೆಹಲಿ, ಮೇರಠ್ ಮತ್ತು ಗಾಜಿಯಾಬಾದ್ ನಡುವೆ ನಿರ್ಮಾಣ ಮಾಡಲಾಗುತ್ತಿರುವ ಆರ್‌ಆರ್‌ಟಿಎಸ್ ರೈಲು ಸೇವೆಯ ಮೊದಲ 17 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅ.20ರಂದು ಚಾಲನೆ ನೀಡಲಿದ್ದಾರೆ.
ನವದೆಹಲಿ: ಪಂಚರಾಜ್ಯ ಚುನಾವಣೆಯ ಬೆನ್ನಲ್ಲೇ ಕೇಂದ್ರ ಸರ್ಕಾರ 1 ಕ್ವಿಂಟಲ್ ಗೋಧಿಯ ಬೆಂಬಲ ಬೆಲೆಯನ್ನು 150 ರು. ಹೆಚ್ಚಳ ಮಾಡಿದೆ. ಈ ಮೂಲಕ 2024-25ರ ಮಾರುಕಟ್ಟೆ ಋತುಮಾನಕ್ಕೆ ಅನ್ವಯವಾಗುವಂತೆ ಗೋಧಿಯ ಬೆಂಬಲ ಬೆಲೆ 2,275 ರು.ಗೆ ಏರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಎಫ್‌ಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದು ಅತಿ ಹೆಚ್ಚಿನ ಬೆಂಬಲ ಬೆಲೆ ಏರಿಕೆಯಾಗಿದೆ. ಸಂಪುಟ ಸಮಿತಿ ಸಭೆಯಲ್ಲಿ 2024-25 ಮಾರುಕಟ್ಟೆ ಋತುವಿನ ಎಲ್ಲ ಅಧಿಕೃತ ಚಳಿಗಾಲದ ಬೆಳೆಗಳಿಗೂ ಎಂಎಸ್‌ಪಿ ಹೆಚ್ಚಳ ಅನ್ವಯವಾಗಲಿದೆ ಎಂದು ಅನುರಾಗ್ ಹೇಳಿದ್ದಾರೆ.