ಸಾರಾಂಶ
ಒಂದು ಬದಿಯಲ್ಲಿ ರಾಮಲಲ್ಲಾ, ಮತ್ತೊಂದೆಡೆ ಮಂದಿರ ಇರುವ ನಾಣ್ಯವನ್ನು ವಿತ್ತ ಸಚಿವಾಲಯ ಬಿಡುಗಡೆ ಮಾಡಿದೆ.
ನವದೆಹಲಿ: ಅಯೋಧ್ಯೆಯ ಶ್ರರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿರುವ ಸ್ಮರಣಾರ್ಥ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಸ್ಮರಣಿಕೆಯ ನಾಣ್ಯವನ್ನು ಬಿಡುಗಡೆಗೊಳಿಸಿದರು.
ಈ ನಾಣ್ಯದಲ್ಲಿ ಒಂದು ಬದಿಯಲ್ಲಿ ರಾಮಲಲ್ಲಾ ವಿಗ್ರಹ ಹಾಗೂ ಇನ್ನೊಂದು ಬದಿಯಲ್ಲಿ ಶ್ರೀರಾಮ ಮಂದಿರವನ್ನು ಮುದ್ರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಸ್‌ಪಿಎಮ್‌ಸಿಐಎಲ್)ದ 19ನೇ ಸಂಸ್ಥಾಪನಾ ದಿನದಂದು ನಿರ್ಮಲಾ ಒಟ್ಟು 3 ನಾಣ್ಯಗಳನ್ನು ಬಿಡುಗಡೆಗೊಳಿಸಿದರು.
ಈ ಪೈಕಿ ಒಂದು ರಾಮ ಮಂದಿರ ಸ್ಮರಣಾರ್ಥವಾಗಿದ್ದರೆ ಇನ್ನೊಂದು ಭಗವಾನ್ ಬುದ್ಧ ಹಾಗೂ ಸ್ತೂಪಗಳ ಚಿತ್ರಗಳನ್ನು ಹೊಂದಿದೆ. ಮೂರನೇಯ ನಾಣ್ಯದಲ್ಲಿ ಭಾರತದ ಅಳಿವಿನಂಚಿನಲ್ಲಿರುವ ಘೇಂಡಾಮೃಗ (ಒನ್ ಹಾರ್ನ್ಡ್ ರೈನೋಸರಸ್) ಪ್ರಾಣಿಯ ಚಿತ್ರವನ್ನು ಹೊಂದಿದೆ.