ಸಾರಾಂಶ
ಇನ್ನು ಮುಂದೆ ಪ್ರತಿವರ್ಷ ಸೆ.17ರಂದು ಹೈದರಾಬಾದ್ ವಿಮೋಚನಾ ದಿವಸ ಎಂದು ಆಚರಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
ನವದೆಹಲಿ: ಪ್ರತಿ ವರ್ಷ ಸೆಪ್ಟೆಂಬರ್ 17ರಂದು “ಹೈದರಾಬಾದ್ ವಿಮೋಚನಾ ದಿನ’ ಆಚರಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ.
ಆ.15, 194 ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಹೈದರಾಬಾದ್ ಪ್ರಾಂತ್ಯವು 13 ತಿಂಗಳವರೆಗೆ ಸ್ವಾತಂತ್ರ್ಯವನ್ನು ಪಡೆದಿರಲಿಲ್ಲ ಮತ್ತು ನಿಜಾಮರ ಆಳ್ವಿಕೆಯಲ್ಲಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಈಗಿನ ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳು ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದವು. ಸೆಪ್ಟೆಂಬರ್ 17, 1948 ರಂದು ‘ಆಪರೇಷನ್ ಪೋಲೋ’ ಎಂಬ ಪೊಲೀಸ್ ಕ್ರಮದ ನಂತರ ಈ ಪ್ರದೇಶವನ್ನು ನಿಜಾಮರ ಆಳ್ವಿಕೆಯಿಂದ ಮುಕ್ತಗೊಳಿಸಲಾಗಿತ್ತು.