ಇಂದಿನಿಂದ ₹29ಗೆ ಸಿಗಲಿದೆ ಕೇಂದ್ರದ ಭಾರತ್‌ ಅಕ್ಕಿ!

| Published : Feb 06 2024, 01:34 AM IST / Updated: Feb 06 2024, 08:39 AM IST

Rice

ಸಾರಾಂಶ

ಕೇಂದ್ರ ಸರ್ಕಾರದ ವತಿಯಿಂದ ಭಾರತ್‌ ಅಕ್ಕಿಯನ್ನು 29 ರು.ಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ನವದೆಹಲಿ: ಅಕ್ಕಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಭಾರತ್‌ ಅಕ್ಕಿ ಯೋಜನೆಗೆ ಮಂಗಳವಾರ ಚಾಲನೆ ಸಿಗಲಿದೆ.

 ತಲಾ 5 ಮತ್ತು 10 ಕೆಜಿ ಬ್ಯಾಗ್‌ನಲ್ಲಿ ಮಾರಾಟ ಮಾಡುವ ಈ ಅಕ್ಕಿಗೆ ಪ್ರತಿ ಕೆಜಿಗೆ 29 ರು. ದರ ನಿಗದಿ ಪಡಿಸಲಾಗಿದೆ.

ಎಲ್ಲಿ ಮಾರಾಟ?
ನ್ಯಾಷನಲ್‌ ಅಗ್ರಿಕಲ್ಚರಲ್‌ ಕೋಆಪರೇಟಿವ್‌ ಮಾರ್ಕೆಂಟಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ (ನಾಫೆಡ್‌), ನ್ಯಾಷನಲ್‌ ಕೋಅಪರೇಟಿವ್‌ ಕನ್‌ಸ್ಯೂಮರ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ (ಎನ್‌ಸಿಸಿಫ್‌), ಕೇಂದ್ರೀಯ ಭಂಡಾರಗಳು ಮತ್ತು ಇ ಕಾಮರ್ಸ್‌ಗಳ ತಾಣಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುವುದು. 

ಮೊದಲ ಹಂತದಲ್ಲಿ ಈ ಯೋಜನೆಗಾಗಿ 5 ಲಕ್ಷ ಟನ್‌ ಅಕ್ಕಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರ ಈಗಾಗಲೇ ಭಾರತ್‌ ಆಟಾವನ್ನು ಪ್ರತಿ ಕೆ.ಜಿಗೆ 27.50 ರು.ನಂತೆ ಮತ್ತು ಭಾರತ್‌ ದಾಲ್‌ (ಕಡಲೆ)ಯನ್ನು ಕೆ.ಜಿಗೆ 60 ರು.ನಂತೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದೆ.