ಸಾರಾಂಶ
ಲೋಕಸಭೆಯ ಸಭಾಧ್ಯಕ್ಷರ ಬಳಿ ಸದಸ್ಯರ ಮೈಕ್ ನಿಯಂತ್ರಿಸುವ ಯಾವುದೇ ಸ್ವಿಚ್ ಇಲ್ಲ ಎಂದು ಸಭಾಧ್ಯಕ್ಷ ಓಂ ಬಿರ್ಲಾ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ: ಲೋಕಸಭೆಯ ಸಭಾಧ್ಯಕ್ಷರ ಬಳಿ ಸದಸ್ಯರ ಮೈಕ್ ನಿಯಂತ್ರಿಸುವ ಯಾವುದೇ ಸ್ವಿಚ್ ಇಲ್ಲ ಎಂದು ಸಭಾಧ್ಯಕ್ಷ ಓಂ ಬಿರ್ಲಾ ಸ್ಪಷ್ಟನೆ ನೀಡಿದ್ದಾರೆ.
ಮಾತನಾಡುವಾಗ ತಮ್ಮ ಮೈಕನ್ನು ಆಫ್ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ ವಾರ ಆರೋಪಿಸಿದ್ದರು. ಸೋಮವಾರವೂ ಇದೇ ಆರೋಪ ಮಾಡಿದರು.
ಇದಕ್ಕೆ ಉತ್ತರಿಸಿದ ಓಂ ಬಿರ್ಲಾ, ‘ನಾವು ಕೇವಲ ರೂಲಿಂಗ್ ಹಾಗೂ ನಿರ್ದೇಶನಗಳನ್ನು ನೀಡುತ್ತೇವೆ. ಯಾರಿಗೆ ಮಾತನಾಡಲು ಅನುಮತಿ ಇರುತ್ತದೋ ಅವರ ಮೈಕ್ ಆನ್ ಮಾಡುವಂತೆ ನಾವು ಸೂಚಿಸಿರುತ್ತೇವೆ. ಕುಳಿತವರ ಮೈಕ್ ಆಗ ಆಫ್ ಆಗಿರುತ್ತವೆ. ಆದರೆ ಪೀಠದ ಬಳಿ ಮೈಕ್ ಆಫ್ ಮಾಡುವ ರಿಮೋಟ್ ಕಂಟ್ರೋಲ್ ಇಲ್ಲ’ ಎಂದು ಸ್ಪಷ್ಟಪಡಿಸಿದರು.