ಜೂ.12ರಂದು ಆಂಧ್ರ ಮುಖ್ಯಮಂತ್ರಿ ಆಗಿ ನಾಯ್ಡು ಪ್ರಮಾಣ

| Published : Jun 08 2024, 12:38 AM IST / Updated: Jun 08 2024, 07:34 AM IST

ಜೂ.12ರಂದು ಆಂಧ್ರ ಮುಖ್ಯಮಂತ್ರಿ ಆಗಿ ನಾಯ್ಡು ಪ್ರಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 12 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅಮರಾವತಿ (ಆಂಧ್ರಪ್ರದೇಶ): ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 12 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

‘ಜೂನ್ 12 ರಂದು (ಬುಧವಾರ) ಬೆಳಗ್ಗೆ 11:27 ಕ್ಕೆ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಈ ಮುನ್ನ ಜೂ.9ರಂದು ಅವರು ಶಪಥಕ್ಕೆ ಉದ್ದೇಶಿಸಿದ್ದರು. ಆದರೆ ಅಂದು ಪ್ರಧಾನಿ ಆಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿರುವ ಕಾರಣ ತಮ್ಮ ಪ್ರಮಾಣ ರದ್ದು ಮಾಡಿದ್ದರು.