ಚೀನಾದಿಂದ 6 ಹೊಸ ವಾಯುನೆಲೆ: ಭಾರತಕ್ಕೆ ಸವಾಲು

| Published : Apr 23 2025, 12:38 AM IST

ಚೀನಾದಿಂದ 6 ಹೊಸ ವಾಯುನೆಲೆ: ಭಾರತಕ್ಕೆ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ನೆರೆಯ ರಾಷ್ಟ್ರ ಚೀನಾ ಆರು ಹೊಸ ವಾಯುನೆಲೆಗಳನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಈ ಮೂಲಕ ತನ್ನ ವಾಯುಬಲವನ್ನು ಹೆಚ್ಚಿಸಲು ಮುಂದಾಗಿರುವ ಚೀನಾ ಹಿಮಾಲಯದ ಗಡಿಯುದ್ದಕ್ಕೂ ಭಾರತದ ರಕ್ಷಣೆಗೆ ಸವಾಲಾಗುವ ಸಾಧ್ಯತೆಯಿದೆ.

ಬೀಜಿಂಗ್: ನೆರೆಯ ರಾಷ್ಟ್ರ ಚೀನಾ ಆರು ಹೊಸ ವಾಯುನೆಲೆಗಳನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಈ ಮೂಲಕ ತನ್ನ ವಾಯುಬಲವನ್ನು ಹೆಚ್ಚಿಸಲು ಮುಂದಾಗಿರುವ ಚೀನಾ ಹಿಮಾಲಯದ ಗಡಿಯುದ್ದಕ್ಕೂ ಭಾರತದ ರಕ್ಷಣೆಗೆ ಸವಾಲಾಗುವ ಸಾಧ್ಯತೆಯಿದೆ.

ಚೀನಾ ಸ್ಥಾಪಿಸಲು ಹೊರಟಿರುವ ಹೊಸ ವಾಯು ನೆಲೆಗಳ ಉಪಗ್ರಹ ಚಿತ್ರ ಬಿಡುಗಡೆಯಾಗಿದ್ದು. ಇದರಲ್ಲಿ ಹೊಸ ಏಪ್ರನ್ ಸ್ಥಳ, ಎಂಜಿನ್ ಪರೀಕ್ಷಾ ಪ್ಯಾಡ್‌ಗಳು, ಇತರ ರಚನೆಗಳು ಜೊತೆಗೆ ಚೀನಾದ ವಾಯುನೆಲೆ ಪ್ರಮುಖ ಅಂಶವಾದ ಡಾಂಬರು ರಸ್ತೆಗಳನ್ನು ಚಿತ್ರಣವನ್ನು ಇದು ಒಳಗೊಂಡಿದೆ. ಉಪಗ್ರಹ ಚಿತ್ರವು ಟಿಂಗ್ರಿ, ಲುಂಜೆ, ಬುರಾಂಗ್, ಯುಟಿಯಾನ್ ಮತ್ತು ಯಾರ್ಕಾಂತ್‌ಗಳಲ್ಲಿ ಹೊಸ ವಾಯುನೆಲೆಗಳನ್ನು ಒಳಗೊಂಡಿದೆ. ಇನ್ನು ಈ ಸಂಬಂಧ ಭಾರತದ ವಾಯುಪಡೆಯು ಪ್ರತಿಕ್ರಿಯಿಸಿದ್ದು, ‘ನಮ್ಮಲ್ಲಿ ನಮ್ಮದೇ ಆದ ಕಾರ್ಯವಿಧಾನಗಳಿವೆ ಮತ್ತು ನಾವು ನಮ್ಮನ್ನು ಜಾಗೃತರಾಗಿರಿಸಿಕೊಳ್ಳುತ್ತೇವೆ’ ಎಂದಿದೆ.