ಉದ್ಘಾಟನೆ ವೇಳೆ ರಾಮಮಂದಿರ ವೆಬ್‌ ಹ್ಯಾಕ್‌ಗೆ ಚೀನಾ, ಪಾಕ್ ಹ್ಯಾಕರ್ಸ್‌ ಯತ್ನ

| Published : Mar 07 2024, 01:46 AM IST / Updated: Mar 07 2024, 04:00 PM IST

ಉದ್ಘಾಟನೆ ವೇಳೆ ರಾಮಮಂದಿರ ವೆಬ್‌ ಹ್ಯಾಕ್‌ಗೆ ಚೀನಾ, ಪಾಕ್ ಹ್ಯಾಕರ್ಸ್‌ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ವೇಳೆ ಮಂದಿರದ ವೆಬ್‌ಸೈಟ್‌ ಹಾಗೂ ಕೇಂದ್ರ ಸರ್ಕಾರದ ಪ್ರಸಾರ ಭಾರತಿ ಸೇರಿದಂತೆ ಹಲವು ಸರ್ಕಾರಿ ವೆಬ್‌ಗಳನ್ನು ಚೀನಾ ಹಾಗೂ ಪಾಕಿಸ್ತಾನಿ ಹ್ಯಾಕರ್‌ಗಳು ಹ್ಯಾಕ್‌ ಮಾಡಲು ಇನ್ನಿಲ್ಲದಂತೆ ಯತ್ನ ನಡೆಸಿದ್ದರು

ನವದೆಹಲಿ: ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ವೇಳೆ ಮಂದಿರದ ವೆಬ್‌ಸೈಟ್‌ ಹಾಗೂ ಕೇಂದ್ರ ಸರ್ಕಾರದ ಪ್ರಸಾರ ಭಾರತಿ ಸೇರಿದಂತೆ ಹಲವು ಸರ್ಕಾರಿ ವೆಬ್‌ಗಳನ್ನು ಚೀನಾ ಹಾಗೂ ಪಾಕಿಸ್ತಾನಿ ಹ್ಯಾಕರ್‌ಗಳು ಹ್ಯಾಕ್‌ ಮಾಡಲು ಇನ್ನಿಲ್ಲದಂತೆ ಯತ್ನ ನಡೆಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. 

ಇಂಥದ್ದೊಂದು ದಾಳಿಯನ್ನು ಮೊದಲೇ ಊಹಿಸಿದ್ದ ಭಾರತ ಸರ್ಕಾರವು ಹ್ಯಾಕರ್‌ಗಳ 1244 ಐಪಿ ವಿಳಾಸಗಳನ್ನು ನಿರ್ಬಂಧಿಸಿ ದಾಳಿಗಳನ್ನು ತಡೆಗಟ್ಟಿದೆ.

ರಾಮಮಂದಿರ ಉದ್ಘಾಟನೆಗೂ ಮುನ್ನ ರಾಮಮಂದಿರ ವೆಬ್‌, ಪ್ರಸಾರ ಭಾರತಿ, ಯುಪಿ ಪೊಲೀಸ್, ಅಯೋಧ್ಯೆ ವಿಮಾನ ನಿಲ್ದಾಣ, ಯುಪಿ ಪ್ರವಾಸೋದ್ಯಮ ಮತ್ತು ಪವರ್ ಗ್ರಿಡ್ ಸೇರಿದಂತೆ 264 ವೆಬ್‌ಸೈಟ್‌ಗಳ ಮೇಲೆ ಚೀನಾ-ಪಾಕ್‌ ಹ್ಯಾಕರ್‌ಗಳು ಕಣ್ಣಿಟ್ಟಿದ್ದರು. 

ಇದನ್ನು ಅರಿತ ಭಾರತ ಸರ್ಕಾರ ಮೊದಲು ಹ್ಯಾಕಿಂಗ್‌ಗೆ ಯತ್ನಿಸುತ್ತಿದ್ದ140 ಐಪಿ ಅಡ್ರೆಸ್‌ಗಳಿಗೆ ಇಂಟರ್ನೆಟ್‌ ಸೌಲಭ್ಯ ನಿಲ್ಲಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿತು. 

ಆದರೂ ಹ್ಯಾಕಿಂಗ್‌ ಯತ್ನ ಹೆಚ್ಚಾದಾಗ 1244 ಐಪಿ ವಿಳಾಸಗಳನ್ನು ನಿರ್ಬಂಧಿಸಲಾಯಿತು. ಆಗ ದಾಳಿಗಳು ಕಡಿಮೆಯಾದವು’ ಎಂದು ಅಧಿಕಾರಿಯೊಬ್ಬರು ಹೇಳಿದರು.