ಸಾರಾಂಶ
ನವದೆಹಲಿ: ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿದ್ದಾಗ, ತಮ್ಮ ಮನೆಯನ್ನು ನವೀಕರಿಸಿಕೊಳ್ಳಲು 75-80 ಕೋಟಿ ರು. ದುಂದು ವೆಚ್ಚ ಮಾಡಿದ್ದರು ಎಂದು ಸಿಎಜಿ ವರದಿ ಹೇಳಿದೆ ಎಂದು ಬಿಜೆಪಿ ಆರೋಪಿಸಿದೆ.
ನವದೆಹಲಿ: ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿದ್ದಾಗ, ತಮ್ಮ ಮನೆಯನ್ನು ನವೀಕರಿಸಿಕೊಳ್ಳಲು 75-80 ಕೋಟಿ ರು. ದುಂದು ವೆಚ್ಚ ಮಾಡಿದ್ದರು ಎಂದು ಸಿಎಜಿ ವರದಿ ಹೇಳಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಬಿಜೆಪಿಯ ಸಂಬಿತ್ ಪಾತ್ರ ಮಾತನಾಡಿ, ‘ಕೇಜ್ರಿವಾಲ್ ಅವರ ನಿವಾಸ ನವೀಕರಣಕ್ಕೆ ಮೊದಲು 7.61 ಕೋಟಿ ರು. ಎಂದು ಅಂದಾಜಿಸಲಾಗಿತ್ತು. ಆದರೆ ಈ ಮೊತ್ತವನ್ನು ಹಲವು ಬಾರಿ ಏರಿಕೆ ಮಾಡಿ 2022ರ ಏಪ್ರಿಲ್‌ನಲ್ಲಿ 33.66 ಕೋಟಿ ರು.ಗಳನ್ನು ಕೇಜ್ರಿವಾಲ್ ಮನೆ ನವೀಕರಣಕ್ಕೆ ವೆಚ್ಚ ಮಾಡಲಾಗಿದೆ. ಇದು ಅಂದಾಜಿಗಿಂತ ಶೇ.342.31ರಷ್ಟು ಹೆಚ್ಚು ಮೊತ್ತವಾಗಿದೆ. ಇದು ಮಹಾಲೇಖಪಾಲಕರ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದಿದ್ದಾರೆ.ಮತ್ತೊಂದೆಡೆ ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವಾ, ಅಂದಾಜಿನ ಪ್ರಕಾರ 75-80 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.