ಸಾರಾಂಶ
ರಕ್ತದಾನ ಪವಿತ್ರವಾದ್ದು. ದಾನಗಳಲ್ಲೇ ಮಹಾದಾನ ರಕ್ತದಾನ ಎನ್ನುವ ಮಾತಿದೆ. ಅದಕ್ಕೆ ಪೂರಕ ಎನ್ನುವಂತೆ ಗುಜರಾತ್ ಮಾನೆಕ್‌ಬಾಗ್‌ನ ಪಟೇಲ್ ಕುಟುಂಬ ಇದುವರೆಗೆ 630 ಲೀ. ರಕ್ತ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ.
ಅಹಮದಾಬಾದ್: ರಕ್ತದಾನ ಪವಿತ್ರವಾದ್ದು. ದಾನಗಳಲ್ಲೇ ಮಹಾದಾನ ರಕ್ತದಾನ ಎನ್ನುವ ಮಾತಿದೆ. ಅದಕ್ಕೆ ಪೂರಕ ಎನ್ನುವಂತೆ ಗುಜರಾತ್ ಮಾನೆಕ್‌ಬಾಗ್‌ನ ಪಟೇಲ್ ಕುಟುಂಬ ಇದುವರೆಗೆ 630 ಲೀ. ರಕ್ತ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ.
ಮಾನೆಕ್‌ಬಾಗ್‌ನಲ್ಲಿ 4 ಮಂದಿ ಸಹೋದರ, 4 ಮಂದಿ ಸಹೋದರಿಯರಿರುವ ಈ ಕುಟುಂಬವೊಂದರಲ್ಲಿ 27 ಸದಸ್ಯರಿದ್ದಾರೆ. ಈ ಕುಟುಂಬದಲ್ಲಿ ಎಲ್ಲರೂ ರಕ್ತದಾನಿಗಳೇ ಆಗಿದ್ದು, 16 ಮಂದಿ 50 ಬಾರಿ, 4 ಮಂದಿ 100 ಸಲ ರಕ್ತದಾನ ಮಾಡಿರುವ ಸಾಧನೆ ಹೊಂದಿದ್ದಾರೆ. ಇನ್ನು ಕುಟುಂಬಸ್ಥರೇ ಹೇಳುವಂತೆ 27 ಸದಸ್ಯರು ಸೇರಿ ಇದುವರೆಗೆ 1,400 ಯುನಿಟ್ ರಕ್ತದಾನ ಮಾಡಿದ್ದಾರೆ. ಅಂದರೆ ಈ ಕುಟುಂಬ ಮಾಡಿದ ಒಟ್ಟು ರಕ್ತದಾನದ ಪ್ರಮಾಣ 630 ಲೀ.ಅಹಮದಾಬಾದ್‌ನ್ನು ರಕ್ತದಾನದ ರಾಜಧಾನಿ ಅಂತಲೇ ಕರೆಯುತ್ತಾರೆ. ಈ ನಗರದಲ್ಲಿ 139 ಮಂದಿ 100 ಬಾರಿ ರಕ್ತದಾನ ಮಾಡಿದ್ದಾರೆ. 2 ಕುಟುಂಬಗಳು 350 ಲೀ.ಗಿಂತಲೂ ಹೆಚ್ಚು ರಕ್ತದಾನ ಮಾಡಿದ್ದು, ಆ ಪೈಕಿ ಪಟೇಲ್ ಕುಟುಂಬ ಅತಿ ಹೆಚ್ಚು ಅಂದರೆ 630 ಲೀ ರಕ್ತದಾನ ಮಾಡಿದೆ.