ಚೀನಾ ಸೋಂಕನ್ನು ಎದುರಿಸ್ತೇವೆ: ಕೇಂದ್ರ

| Published : Nov 25 2023, 01:15 AM IST

ಸಾರಾಂಶ

ಕೋವಿಡ್‌ ಎದುರಿಸಿದ ಅನುಭವ ನಮಗಿದೆ. ಇದು ಅಪಾಯಕಾರಿ ಅಲ್ಲ, ಆತಂಕ ಬೇಡ. ಚೀನಾದಲ್ಲಿ ತುಸು ಆತಂಕ ಮೂಡಿಸುತ್ತಿರುವ ನ್ಯುಮೋನಿಯಾ ರೀತಿಯ ನಿಗೂಢ ಕಾಯಿಲೆ (ಎಚ್‌9ಎನ್‌2 ವೈರಸ್‌) ಕುರಿತು ಆತಂಕ ಪಡಬೇಕಿಲ್ಲ ಎಂದು ಭಾರತದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ‘ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿರುವ ವರದಿಯಲ್ಲಿ ಪ್ರಸರಣದ ಪ್ರಮಾಣ ತೀರಾ ಕಡಿಮೆಯಿರುವುದರಿಂದ ಯಾವುದೇ ರೀತಿಯ ಅಪಾಯ ಸಂಭವಿಸುವ ಸಾಧ್ಯತೆ ಇಲ್ಲ. ಆದರೂ ಕೋವಿಡ್‌ ಎದುರಿಸಿದ ಅನುಭವ ಆಧರಿಸಿ ಈ ಕಾಯಿಲೆ ಎದುರಿಸಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದೆ.

ನವದೆಹಲಿ: ಚೀನಾದಲ್ಲಿ ತುಸು ಆತಂಕ ಮೂಡಿಸುತ್ತಿರುವ ನ್ಯುಮೋನಿಯಾ ರೀತಿಯ ನಿಗೂಢ ಕಾಯಿಲೆ (ಎಚ್‌9ಎನ್‌2 ವೈರಸ್‌) ಕುರಿತು ಆತಂಕ ಪಡಬೇಕಿಲ್ಲ ಎಂದು ಭಾರತದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ‘ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿರುವ ವರದಿಯಲ್ಲಿ ಪ್ರಸರಣದ ಪ್ರಮಾಣ ತೀರಾ ಕಡಿಮೆಯಿರುವುದರಿಂದ ಯಾವುದೇ ರೀತಿಯ ಅಪಾಯ ಸಂಭವಿಸುವ ಸಾಧ್ಯತೆ ಇಲ್ಲ. ಆದರೂ ಕೋವಿಡ್‌ ಎದುರಿಸಿದ ಅನುಭವ ಆಧರಿಸಿ ಈ ಕಾಯಿಲೆ ಎದುರಿಸಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದೆ.

‘ಎಚ್‌9ಎನ್‌2 ಎಂಬುದು ಮಕ್ಕಳ ಉಸಿರಾಟ ಕಾಯಿಲೆಯಾಗಿದ್ದು, ಚೀನಾ ದೇಶದಲ್ಲಿ ತುಸು ಹೆಚ್ಚಾಗಿ ಬಾಧಿಸಲು ಪ್ರಾರಂಭಿಸಿದೆ. ಇದು ಅಲ್ಪ ಪ್ರಮಾಣದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ಅಂಟುರೋಗವಾಗಿದ್ದರೂ ಅಪಾಯಕಾರಿಯಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದೃಢಪಡಿಸಿದೆ. ಭಾರತದ ಆರೋಗ್ಯ ಸಚಿವಾಲಯ ಈ ರೋಗ ಭಾರತದಲ್ಲಿ ರೋಗ ಹರಡದಂತೆ ಹಲವು ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ, ಒಂದು ವೇಳೆ ಉಲ್ಬಣಗೊಂಡರೂ ಸಹ ಅದನ್ನು ಕ್ಲಸ್ಟರ್‌ ಮಟ್ಟದಲ್ಲಿ ಅದನ್ನು ಎದುರಿಸಲು ಸಕಲ ರೀತಿಯಲ್ಲೂ ‘ಒಂದು ದೇಶ ಒಂದು ಆರೋಗ್ಯ’ ಘೋಷವಾಕ್ಯದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

‘ಕೋವಿಡ್‌ ನಂತರದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯ ಅಗಾಧ ಪ್ರಮಾಣದಲ್ಲಿ ಸುಧಾರಣೆ ಕಂಡಿದ್ದು, ಯಾವುದೇ ರೀತಿಯ ಅಪಾಯ ಬಂದೊದಗಿದರೂ ಅದನ್ನು ಎದುರಿಸಲು ಸಕಲ ರೀತಿಯಲ್ಲೂ ಆರೋಗ್ಯ ಕ್ಷೇತ್ರ ಸನ್ನದ್ಧವಾಗಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು’ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.