ಸಾರಾಂಶ
ಕೇರಳದ ವಯನಾಡಿನಲ್ಲಿ ಭೂಕುಸಿತದ ಭೀಕರತೆಗೆ ಜನ ನಲುಗಿ ಹೋಗಿರುವ ನಡುವೆಯೇ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದೆ. ಇಲ್ಲಿನ ಮೂರು ಜಿಲ್ಲೆಗಳಲ್ಲಿ ಸಂಭವಿಸಿದ ಮೇಘಸ್ಫೋಟಕ್ಕೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಶಿಮ್ಲಾ: ಕೇರಳದ ವಯನಾಡಿನಲ್ಲಿ ಭೂಕುಸಿತದ ಭೀಕರತೆಗೆ ಜನ ನಲುಗಿ ಹೋಗಿರುವ ನಡುವೆಯೇ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದೆ. ಇಲ್ಲಿನ ಮೂರು ಜಿಲ್ಲೆಗಳಲ್ಲಿ ಸಂಭವಿಸಿದ ಮೇಘಸ್ಫೋಟಕ್ಕೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.ಹಿಮಾಚಲ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯ ಜಿಲ್ಲೆಗಳಾಗಿರುವ ಶಿಮ್ಲಾ, ಕುಲು, ಮಂಡಿ ಭಾಗದಲ್ಲಿ ಗುರುವಾರ ಮುಂಜಾನೆ ಈ ದುರಂತ ನಡೆದಿದೆ. ಕುಲುವಿನ ನಿರ್ಮಂದ್, ಸೈಂಜ್, ಮಲಾನಾ, ಮಂಡಿಯ ಪಾಧಾರ್, ಶಿಮ್ಲಾದ ರಾಂಪುರದಲ್ಲಿ ಮೇಘಸ್ಫೋಟ ಸಂಭವಿಸಿದೆ.
ಆಗ ಸಂಭವಿಸಿದ ದಿಢೀರ್ ಪ್ರವಾಹದ ದುರಂತಕ್ಕೆ ಹಲೆವೆಡೆ ಆಸ್ತಿ ಪಾಸ್ತಿಗಳು ನಷ್ಟವಾಗಿದ್ದು, ಮನೆಗಳು, ಶಾಲೆ, ಆಸ್ಪತ್ರೆಗಳು ಹಾನಿಗೀಡಾಗಿವೆ. ರಸ್ತೆಗಳು ಕೊಚ್ಚಿ ಹೋಗಿದ್ದು, ಮನಾಲಿ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಬಿಯಾಸ್ ನದಿಯ ಅಬ್ಬರ ಮತ್ತು ಭೂಕುಸಿತ ಪರಿಣಾಮ ಮನಾಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯೂ ಹಾನಿಗೊಳಗಾಗಿದೆ. ಇನ್ನು ಜಲವಿದ್ಯುತ್ ಕಾಮಗಾರಿ ಪ್ರದೇಶದ ಸಮೀಪದಲ್ಲಿರುವ ಕೆಲವು ನಾಗರಿಕರು ಮೇಘಸ್ಪೋಟದ ಬಳಿಕ ನಾಪತ್ತೆಯಾಗಿದ್ದಾರೆ.50 ಮಂದಿ ಕಾಣೆ:
ದುರಂತದಲ್ಲಿ ರಾಜ್ಯದ ವಿವಿಧ ಕಡೆ 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸರು, ಸ್ಥಳೀಯ ಪೊಲೀಸರು, ಗೃಹ ರಕ್ಷಕದಳ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನಗಳ ಕಾಲ ಈ ಮೂರು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ.ದುರಂತದ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಪ್ರತಿಕ್ರಿಯಿಸಿದ್ದು,‘ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ರಸ್ತೆ ಸೇರಿದಂತೆ ಕೆಲ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ’ ಎಂದಿದ್ದಾರೆ.