ಅಭಿಮಾನಿಗಳ ಶಿಸ್ತು ನಟರ ಕೆಲಸ, ನಿಯಮ ಉಲ್ಲಂಘನೆ ಸಹಿಸಲ್ಲ : ತೆಲಂಗಾಣದ ಮುಖ್ಯಮಂತ್ರಿ ಸಿಎಂ ರೇವಂತ್‌

| Published : Dec 27 2024, 12:46 AM IST / Updated: Dec 27 2024, 04:57 AM IST

ಸಾರಾಂಶ

‘ತಮ್ಮ ಅಭಿಮಾನಿಗಳು ಶಿಸ್ತಿನಿಂದ ವರ್ತಿಸುವಂತೆ ಮಾಡುವುದು ನಟರ ಹೊಣೆ. ಒಂದು ವೇಳೆ ಯಾವುದೇ ಅನಾಹುತವಾದರೆ ಕಾನೂನು ನಿರ್ವಹಣೆ ಬಗ್ಗೆ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ತೆಲುಗು ಚಿತ್ರರಂಗಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಹೈದರಾಬಾದ್‌ : ‘ತಮ್ಮ ಅಭಿಮಾನಿಗಳು ಶಿಸ್ತಿನಿಂದ ವರ್ತಿಸುವಂತೆ ಮಾಡುವುದು ನಟರ ಹೊಣೆ. ಒಂದು ವೇಳೆ ಯಾವುದೇ ಅನಾಹುತವಾದರೆ ಕಾನೂನು ನಿರ್ವಹಣೆ ಬಗ್ಗೆ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ತೆಲುಗು ಚಿತ್ರರಂಗಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಟಾಲಿವುಡ್‌ ಜನಪ್ರಿಯ ನಟ ಅಲ್ಲು ಅರ್ಜುನ್‌ರ ಬಂಧನ, ಬಿಡುಗಡೆ ಪ್ರಹಸನದಲ್ಲಿ ಸರ್ಕಾರದ ಕೈವಾಡದ ಕುರಿತು ಭಾರೀ ಪರ- ವಿರೋಧ ಚರ್ಚೆ ನಡೆದ ಬೆನ್ನಲ್ಲೇ, ಚಿತ್ರರಂಗದ ಪ್ರಮುಖರು ಗುರುವಾರ ಸಿಎಂ ರೇವಂತ್‌ ರೆಡ್ಡಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಚಿತ್ರೋದ್ಯಮಕ್ಕೆ ಇರಬೇಕಾದ ಸಾಮಾಜಿಕ ಹೊಣೆಗಾರಿಕೆ ಅಗತ್ಯತೆಯ ಬಗ್ಗೆ ರೇವಂತ್‌ ರೆಡ್ಡಿ ಪಾಠ ಮಾಡಿದ್ದಾರೆ. ಆದರೆ ಚಿತ್ರರಂಗದ ಅಭಿವೃದ್ಧಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ.