ಸಾರಾಂಶ
ಬಿಜೆಪಿ-ಶಿವಸೇನೆ (ಶಿಂಧೆ ಬಣ)- ಎನ್‌ಸಿಪಿ (ಅಜಿತ್ ಪವಾರ್) ಬಣಗಳನ್ನು ಒಳಗೊಂಡ ಮಹಾರಾಷ್ಟ್ರದ ಮಹಾಯುತಿ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಾಲಿ ಸಿಎಂ ಏಕನಾಥ ಶಿಂಧೆ ಅವರೇ ಬಿಂಬಿತವಾಗುವ ಸಾಧ್ಯತೆ ಇದೆ. ಈ ಕುರಿತಂತೆ ಬಿಜೆಪಿ ನಾಯಕ ಹಾಗೂ ಹಾಲಿ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರು ಸುಳಿವು ನೀಡಿದ್ದಾರೆ.
ಮುಂಬೈ: ಬಿಜೆಪಿ-ಶಿವಸೇನೆ (ಶಿಂಧೆ ಬಣ)- ಎನ್‌ಸಿಪಿ (ಅಜಿತ್ ಪವಾರ್) ಬಣಗಳನ್ನು ಒಳಗೊಂಡ ಮಹಾರಾಷ್ಟ್ರದ ಮಹಾಯುತಿ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಾಲಿ ಸಿಎಂ ಏಕನಾಥ ಶಿಂಧೆ ಅವರೇ ಬಿಂಬಿತವಾಗುವ ಸಾಧ್ಯತೆ ಇದೆ. ಈ ಕುರಿತಂತೆ ಬಿಜೆಪಿ ನಾಯಕ ಹಾಗೂ ಹಾಲಿ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರು ಸುಳಿವು ನೀಡಿದ್ದಾರೆ.
ಮಹಾ ವಿಕಾಸ್ ಅಘಾಡಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಬಿಂಬಿಸಬೇಕು. ಚುನಾವಣೆ ಬಳಿಕ ಅವರಿಂದ ಯಾರೂ ಮುಖ್ಯಮಂತ್ರಿಯಾಗದ ಕಾರಣ ಅಭ್ಯರ್ಥಿಯನ್ನು ಅವರು ಬಿಂಬಿಸುತ್ತಿಲ್ಲ. ಆದರೆ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲೇ ಕುಳಿತಿದ್ದಾರೆ ಎಂದು ಏಕನಾಥ ಶಿಂಧೆ ಅವರತ್ತ ಫಡ್ನವೀಸ್ ಎಂದು ಬೊಟ್ಟು ಮಾಡಿದ್ದಾರೆ.ಶಿಂಧೆ ಅವರನ್ನೇ ಮುಖ್ಯಮಂತ್ರಿ ಎಂದು ಬಿಂಬಿಸಿ ಮಹಾರಾಷ್ಟ್ರದಲ್ಲಿ ಹೆಚ್ಚು ವಿಧಾನಸಭೆ ಸೀಟುಗಳಲ್ಲಿ ಸ್ಪರ್ಧೆ ಮಾಡುವ ಒಲವು ಬಿಜೆಪಿಯಲ್ಲಿ ಇದ್ದಂತಿದೆ. ಇದಕ್ಕೆ ಇಂಬು ನೀಡುವಂತೆ ವಿಧಾನಸಭೆ ಚುನಾವಣೆ ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ಏಕನಾಥ ಶಿಂಧೆ ಅವರು ತ್ಯಾಗ ಮಾಡಲು ಸಿದ್ಧರಿರಬೇಕು. ಒಕ್ಕೂಟ ಗಟ್ಟಿಯಾಗಿರಲು ಬಿಜೆಪಿ ಮಾಡಿದ ರೀತಿಯಲ್ಲೇ ಅವರು ತ್ಯಾಗ ಮಾಡಬೇಕು ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬಾವನ್‌ಕುಲೆ ಅವರು ಹೇಳಿದ್ದಾರೆ.