ಸಾರಾಂಶ
ಭಾರತೀಯ ಕರಾವಳಿಯ ಕಾವಲು ಪಡೆಯ ಅಧಿಕಾರಿಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಬಳಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 5500 ಕೆಜಿಯಷ್ಟು ಭಾರೀ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮ್ಯಾನ್ಮಾರ್‌ನ ಇಬ್ಬರು ಪ್ರಜೆಗಳನ್ನು ಬಂಧಿಸಲಾಗಿದೆ.
ಪೋರ್ಟ್‌ಬ್ಲೇರ್: ಭಾರತೀಯ ಕರಾವಳಿಯ ಕಾವಲು ಪಡೆಯ ಅಧಿಕಾರಿಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಬಳಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 5500 ಕೆಜಿಯಷ್ಟು ಭಾರೀ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮ್ಯಾನ್ಮಾರ್‌ನ ಇಬ್ಬರು ಪ್ರಜೆಗಳನ್ನು ಬಂಧಿಸಲಾಗಿದೆ.
ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 25000 ಕೋಟಿ ರು.ನಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಕಾವಲು ಪಡೆ ವಶಪಡಿಸಿಕೊಂಡ ಬೃಹತ್ ಪ್ರಮಾಣದ ಮಾದಕ ವಸ್ತುವಾಗಿದೆ.ನ.23ರಂದು ಕರಾವಳಿ ಕಾವಲು ಪಡೆ ಡೋರ್ನಿಯರ್ ವಿಮಾನ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಪೋರ್ಟ್ ಬ್ಲೇರ್‌ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಬ್ಯಾರೆನ್ ದ್ವೀಪದ ಬಳಿ ಮೀನುಗಾರಿಕೆ ಬೋಟ್‌ನ ಅನುಮಾನಸ್ಪದ ಚಲನೆ ಕಂಡು ಬಂದಿದೆ. ಈ ಮಾಹಿತಿಯನ್ನು ಸಮೀಪದ ಕರಾವಳಿ ಕಾವಲು ಪಡೆಯ ಕಮಾಂಡ್ ಸೆಂಟರ್‌ಗೆ ರವಾನಿಸಲಾಗಿತ್ತು.
ಕೂಡಲೇ ಬೋಟ್‌ನಲ್ಲಿ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಬೋಟ್ ಅನ್ನು ಅಡ್ಡಗಟ್ಟಿ ಅದನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಅದರಲ್ಲಿ ತಲಾ 2 ಕೇಜಿಯ 3000 ಪ್ಯಾಕೆಟ್‌ಗಳಷ್ಟು ನಿಷೇಧಿತ ಮೆಂಥಾಫೆಟಾಮೈನ್ ಡಗ್ಸ್ ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಡ್ರಗ್ಸ್‌ನ ಮೊತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ರು.ನಷ್ಟಿದೆ.ಇತ್ತೀಚೆಗೆ ಗುಜರಾತ್ ಮತ್ತು ದೆಹಲಿಯಲ್ಲಿ ಕೂಡಾ ಅಂದಾಜು 4300 ಕೋಟಿ ರು. ಮೊತ್ತದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.