ಸಿಜೆಪಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಕರೆನೀಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ಹಲವೆಡೆ ಇಂಟರ್ನೆಟ್‌ ಸೇವೆ ಸ್ಥಗಿತ, ಇದರಿಂದ ಯುಪಿಐ ಹಣ ಪಾವತಿ ಆಗದೇ ಪರದಾಟ, ಕೆಲ ರೈಲುಗಳ ಸಂಚಾರ ರದ್ದು, 57 ಮೆಟ್ರೋ ರೈಲು ನಿಲ್ದಾಣಗಳನ್ನು ಬಂದ್‌ ಮಾಡಿದ ಪೊಲೀಸರ ಕ್ರಮದಿಂದಾಗಿ ಸಾರ್ವಜನಿಕರು ಪರದಾಡುವಂತಾಯಿತು.

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ), ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಕರೆನೀಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ಹಲವೆಡೆ ಇಂಟರ್ನೆಟ್‌ ಸೇವೆ ಸ್ಥಗಿತ, ಇದರಿಂದ ಯುಪಿಐ ಹಣ ಪಾವತಿ ಆಗದೇ ಪರದಾಟ, ಕೆಲ ರೈಲುಗಳ ಸಂಚಾರ ರದ್ದು, 57 ಮೆಟ್ರೋ ರೈಲು ನಿಲ್ದಾಣಗಳನ್ನು ಬಂದ್‌ ಮಾಡಿದ ಪೊಲೀಸರ ಕ್ರಮದಿಂದಾಗಿ ಸಾರ್ವಜನಿಕರು ಪರದಾಡುವಂತಾಯಿತು.

ಜಂತರ್‌ ಮಂತರ್‌ ಸುತ್ತಮುತ್ತ 4 ಕಿ.ಮೀ. ವ್ಯಾಪ್ತಿಯಲ್ಲಿ ರದ್ದು

ಜಂತರ್‌ ಮಂತರ್‌ ಸುತ್ತಮುತ್ತ 4 ಕಿ.ಮೀ. ವ್ಯಾಪ್ತಿಯಲ್ಲಿ ಮೊಬೈಲ್‌ ಇಂಟರ್ನೆಟ್‌ ರದ್ದಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಯುಪಿಐ ಮೂಲಕ ಹಣ ಪಾವತಿಸಲು ಹಾಗೂ ಸುದ್ದಿ ಅಪ್‌ಡೇಟ್‌ಗಳನ್ನು ನೋಡಲು ಸಮಸ್ಯೆ ಎದುರಿಸಬೇಕಾಯಿತು. ರೈಲು ಪ್ರಯಾಣಿಕರು ಕೂಡ ಕಾಕ್ರೋಚ್‌ಗಳ ಪ್ರತಿಭಟನೆಯಿಂದಾಗಿ ಅಡ್ಡಕತ್ತರಿಯಲ್ಲಿ ಸಿಲುಕುವಂತಾಯಿತು. ರೈಲು ಸಂಚಾರ ರದ್ದಾಗಿದ್ದರಿಂದ ಪ್ರಯಾಣ ಮುಂದೂಡುವ, ರದ್ದು ಮಾಡುವ ಅನಿವಾರ್ಯತೆ ಎದುರಿಸಬೇಕಾಯಿತು.

ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಭದ್ರತೆ ಕಲ್ಪಿಸಲು ಮುಂದಾಗಿದ್ದ ದೆಹಲಿ ಪೊಲೀಸರು ಜಂತರ್‌ ಮಂತರ್‌ ಸಂಪರ್ಕಿಸುವ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್‌ ಹಾಕಿದ್ದರು. ಇದು ಸಾರ್ವಜನಿಕರ ಸುಗಮ ಸಂಚಾರಕ್ಕೂ ಅಡ್ಡಿ ಉಂಟು ಮಾಡಿತು. ಇನ್ನು 57 ರೈಲು ನಿಲ್ದಾಣಗಳ ಬಂದ್‌ನಿಂದಾಗಿ ನಿತ್ಯದ ಕೆಲಸ-ಕಾರ್ಯಗಳಿಗೆ ಓಡಾಡುವ ಜನ ಸಮಸ್ಯೆ ಎದುರಿಸಬೇಕಾಯಿತು.

ರೈಲು ಪ್ರಯಾಣಿಕರಿಗೆ ಸಂಕಷ್ಟ:

ಇನ್ನು ದೇಶಾದ್ಯಂತ ದೆಹಲಿಗೆ ಆಗಮಿಸುವ 170ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನೂ ರದ್ದು ಮಾಡಲಾಗಿತ್ತು. ಇದರಿಂದ ಪ್ರತಿಭಟನೆ ಜತೆ ಯಾವುದೇ ಸಂಬಂಧ ಇಲ್ಲದಿದ್ದರೂ ಸಾವಿರಾರು ಪ್ರಯಾಣಿಕರು ಸಮಸ್ಯೆಗೆ ಸಿಲುಕಬೇಕಾಯಿತು.