ಕಾಫಿ, ಟೀ, ಇಡ್ಲಿ ಸಾಂಬಾರ್‌ಗೂ ಆಯೋಗದಿಂದ ದರ ನಿಗದಿ

| Published : Mar 30 2024, 12:50 AM IST / Updated: Mar 30 2024, 09:17 AM IST

ಸಾರಾಂಶ

18ನೇ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರಗಳನ್ನು ಜಿಲ್ಲಾ ಚುನಾವಣಾ ಸಮಿತಿಗಳು ನಿಗದಿಗೊಳಿಸಿದ್ದು ಬಹುತೇಕ ಕಡೆ ದರಗಳನ್ನು ಕಳೆದ ಬಾರಿಗಿಂತ ಕಡಿಮೆ ಮಾಡಿರುವುದು ಕಂಡುಬಂದಿದೆ

ನವದೆಹಲಿ: 18ನೇ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರಗಳನ್ನು ಜಿಲ್ಲಾ ಚುನಾವಣಾ ಸಮಿತಿಗಳು ನಿಗದಿಗೊಳಿಸಿದ್ದು ಬಹುತೇಕ ಕಡೆ ದರಗಳನ್ನು ಕಳೆದ ಬಾರಿಗಿಂತ ಕಡಿಮೆ ಮಾಡಿರುವುದು ಕಂಡಿಬಂದಿದೆ.

ಕಾಫಿ-ಟೀ ದರಗಳನ್ನು ದೇಶದ ಬಹುತೇಕ ಕಡೆ ಇಳಿಕೆ ಮಾಡಲ್ಪಟ್ಟಿದ್ದರೆ ಅಚ್ಚರಿ ಎಂಬಂತೆ ಚೆನ್ನೈನಲ್ಲಿ ಏರಿಕೆ ಮಾಡಿ ಒಂದು ಕಪ್‌ ಕಾಫಿಗೆ 15 ರು. ಹಾಗೂ ಒಂದು ಸಮೋಸಾಗೆ 20 ರು. ನಿಗದಿ ಮಾಡಲಾಗಿದೆ. 

ಉಳಿದಂತೆ ಮಾಂಸಾಹಾರದ ದರಗಳೂ ಬಹುತೇಕ ಅದೇ ದರದಲ್ಲಿ ಮುಂದುವರೆದಿದ್ದು, ವ್ಯತಿರಿಕ್ತವೆಂಬಂತೆ ಚೆನ್ನೈನಲ್ಲಿ ಚಿಕನ್‌ ಬಿರಿಯಾನಿ ದರವನ್ನು 180 ರಿಂದ 150 ರು.ಗೆ ಇಳಿಕೆ ಮಾಡಲಾಗಿದೆ.

ಗಮನ ಸೆಳೆಯುತ್ತಿರುವ ಬಲಘಾಟ್: ಮಧ್ಯಪ್ರದೇಶದ ಬಲಘಾಟ್‌ ಜಿಲ್ಲಾ ಚುನಾವಣಾ ಸಮಿತಿಯು ನಿಗದಿ ಮಾಡಿರುವ ದರಪಟ್ಟಿ ಗಮನ ಸೆಳೆಯುತ್ತಿದ್ದು, ಕೇವಲ 20 ರು. ಗೆ ಇಡ್ಲಿ-ಸಾಂಬಾರ್‌-ವಡೆ ನಿಗದಿಯಾಗಿದೆ. ಅಲ್ಲದೆ ಕೇವಲ 30 ರು.ಗೆ ದೋಸೆ ಮತ್ತು ಉಪ್ಮಾ ದರ ನಿಗದಿ ಮಾಡಿದೆ.

ಇದರ ಜೊತೆಗೆ ಇತರ ಸಾಮಾನು, ವಾಹನಗಳ ದರವನ್ನೂ ಆಯೋಗಗಳು ನಿಗದಿಮಾಡಿದ್ದು, ಒಟ್ಟಾರೆ ಚುನಾವಣಾ ವೆಚ್ಚ ₹75 ಲಕ್ಷ ದಿಂದ ₹95 ಲಕ್ಷದೊಳಗೆ ಇರಬೇಕೆಂದು ಬಹುತೇಕ ರಾಜ್ಯ ಚುನಾವಣಾ ಆಯೋಗಗಳು ಪ್ರಕಟಿಸಿವೆ.