ಸಾರಾಂಶ
ಭಾರತದಲ್ಲಿ ಜಾತಿ ತಾರತಮ್ಯವು- ಬಹುಶಃ ವಿಶ್ವದಲ್ಲೇ ಅತ್ಯಂತ ಕೆಟ್ಟದಾಗಿದೆ ಮತ್ತು ಕಾಂಗ್ರೆಸ್ ಶೇ.50ರ ಮೀಸಲಿನ ಕೃತಕ ತಡೆಗೋಡೆಯನ್ನು ಕೆಡವಲಿದೆ.
ಹೈದರಾಬಾದ್: ಭಾರತದಲ್ಲಿ ಜಾತಿ ತಾರತಮ್ಯವು- ಬಹುಶಃ ವಿಶ್ವದಲ್ಲೇ ಅತ್ಯಂತ ಕೆಟ್ಟದಾಗಿದೆ ಮತ್ತು ಕಾಂಗ್ರೆಸ್ ಶೇ.50ರ ಮೀಸಲಿನ ಕೃತಕ ತಡೆಗೋಡೆಯನ್ನು ಕೆಡವಲಿದೆ. ಅರ್ಥಾತ್ ಮೀಸಲನ್ನು ಶೇ.50ಕ್ಕಿಂತ ಹೆಚ್ಚಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು.
ತೆಲಂಗಾಣ ಕಾಂಗ್ರೆಸ್ ಹಮ್ಮಿಕೊಂಡ ಜಾತಿಗಣತಿ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಬಳಿಕ ಜಾತಿಗಣತಿ ನಡೆಸಲಿರುವ 2ನೇ ಕಾಂಗ್ರೆಸ್ ಆಡಳಿತದ ರಾಜ್ಯ ತೆಲಂಗಾಣ ಆಗಲಿದೆ. ನ.6ರಿಂದ ಜಾತಿ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲಿದ್ದು, ತಿಂಗಳಾಂತ್ಯದವರೆಗೆ ನಡೆಸಲಿದೆ. ಜಾತಿಗಣತಿಯಿಂದ ಮೀಸಲು ಮಾರ್ಪಾಡಿಗೆ ನೆರವಾಗಲಿದೆ ಹಾಗೂ ತಾರತಮ್ಯ ನಿವಾರಣೆ ಆಗಲಿದೆ. ಜಾತಿ ಗಣತಿ ವಿಚಾರದಲ್ಲಿ ತೆಲಂಗಾಣ ಇತರರಿಗೆ ಮಾದರಿ ಆಗಲಿದೆ’ ಎಂದರು.