ಸಾರಾಂಶ
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಬೋಸ್ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ ಆರೋಪಿಸಿದ್ದ ಸಂತ್ರಸ್ತ ಮಹಿಳೆ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಕಲ್ಕತ್ತಾ: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಬೋಸ್ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ ಆರೋಪಿಸಿದ್ದ ಸಂತ್ರಸ್ತ ಮಹಿಳೆ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಅಧಿಕಾರದ ಅವಧಿಯಲ್ಲಿ ತಾವು ಚಲಾಯಿಸಿದ ಅಧಿಕಾರ ಮತ್ತು ಕರ್ತವ್ಯದ ಕುರಿತು ರಾಜ್ಯಪಾಲರು ಯಾವುದೇ ನ್ಯಾಯಾಲಯಕ್ಕೂ ಹೇಳಿಕೆ ನೀಡಬೇಕಿಲ್ಲ ಎಂದು ಸಂವಿಧಾನದ 361ನೇ ವಿಧಿಯ ಅಡಿಯಲ್ಲಿ ನೀಡಲಾಗಿರುವ ರಕ್ಷಣೆಯನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಇಂಥ ವಿಧಿಯು ‘ಸಂವಿಧಾನದ ಅಡಿಯಲ್ಲಿ ರಾಜ್ಯಪಾಲರಿಗೆ ರಕ್ಷಣೆ ನೀಡಿರುವ ಅರ್ಥ ಲೈಂಗಿಕ ಕಿರುಕುಳವೂ ಅವರ ಕೆಲಸದ ಭಾಗ ಎಂದೇ? ನ್ಯಾಯ ದೊರಕಲು ಅವರು ಅಧಿಕಾರದಿಂದ ಕೆಳಗಿಳಿಯುವ ತನಕ ಕಾಯಬೇಕೇ’ ಎಂದು ಸಂತ್ರಸ್ತೆ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಕಟುವಾಗಿ ಪ್ರಶ್ನಸಿದ್ದಾರೆ.
ಒಳ್ಳೆಯ ಕೆಲಸ ಕೊಡಿಸುವುದಾಗಿ ಹೇಳಿ ಕರೆಸಿಕೊಂಡ ರಾಜ್ಯಪಾಲರು ಏ.24 ಹಾಗು ಮೇ.2ರಂದು ರಾಜ್ ಭವನದ ಆವರಣದಲ್ಲೇ ತನ್ನ ಮೆಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದರು.