ಪಕ್ಷದ ಕೆಲಸದಲ್ಲಿ ಮಗ್ನ, ಹೀಗಾಗಿ ಮದುವೆ ಆಗಿಲ್ಲ: ರಾಹುಲ್‌

| Published : Oct 11 2023, 12:45 AM IST / Updated: Oct 12 2023, 10:57 AM IST

raul gandhi in chengannur

ಸಾರಾಂಶ

ಎಡೆಬಿಡದ ಕೆಲಸ ಕೆಲಸ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಕಾರಣ ನಾನಿನ್ನೂ ಮದುವೆಯಾಗಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
ನವದೆಹಲಿ: ‘ಎಡೆಬಿಡದ ಕೆಲಸ ಕೆಲಸ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಕಾರಣ ನಾನಿನ್ನೂ ಮದುವೆಯಾಗಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಜೈಪುರದ ಮಾಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ರಾಹುಲ್‌ ಗಾಂಧಿ ನಡೆಸಿರುವ ಸಂವಾದದ ವಿಡಿಯೋವನ್ನು ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ರಾಹುಲ್ ಅವರಿಗೆ ಅಲ್ಲಿನ ಯುವತಿಯರು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪೈಕಿ ಓರ್ವ ಯುವತಿ ‘ನೀವು ತುಂಬಾ ಸ್ಮಾರ್ಟ್ ಮತ್ತು ಸುಂದರವಾಗಿದ್ದೀರಿ. ನೀವು ಏಕೆ ಮದುವೆಯ ಬಗ್ಗೆ ಯೋಚಿಸಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಾಹುಲ್‌ ‘ಏಕೆಂದರೆ ನಾನು ನನ್ನ ಕೆಲಸಗಳು ಮತ್ತು ಕಾಂಗ್ರೆಸ್‌ನಲ್ಲೇ ಸಂಪೂರ್ಣವಾಗಿ ಮಗ್ನನಾಗಿದ್ದೇನೆ’ ಎಂದರು. ಈ ವೇಳೆ ತಮ್ಮಿಷ್ಟದ ತಿಂಡಿಗಳ ಬಗ್ಗೆ ತಿಳಿಸಿದ ಅವರು ‘ಹಾಗಲಕಾಯಿ, ಬಟಾಣಿ ಮತ್ತು ಪಾಲಕ್‌ ಹೊರತು ಎಲ್ಲವನ್ನೂ ಚೆನ್ನಾಗಿ ತಿನ್ನುತ್ತೇನೆ’ ಎಂದು ಹಾಸ್ಯವಾಗಿ ಉತ್ತರಿಸಿದರು.