ಕರ್ನಾಟಕದಂತೆ ಹರ್ಯಾಣದಲ್ಲಿ ಮುಸ್ಲಿಂ ಮೀಸಲಿಗೆ ಆಸ್ಪದ ಕೊಡಲ್ಲ: ಶಾ

| Published : Jul 17 2024, 12:55 AM IST

ಸಾರಾಂಶ

ಕಾಂಗ್ರೆಸ್ ಕರ್ನಾಟಕದಲ್ಲಿ ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಿದಂತೆ ಹರ್ಯಾಣದಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಒಬಿಸಿ ಮೀಸಲಾತಿಯನ್ನು ಮುಸ್ಲಿಮಮರಿಗೆ ನೀಡುತ್ತದೆ. ಆದರೆ ಹರ್ಯಾಣದಲ್ಲಿ ಮುಸ್ಲಿಂ ಮೀಸಲಾತಿಗೆ ನಾವು ಅನುಮತಿ ನೀಡುವುದಿಲ್ಲ, ಇದು ನನ್ನ ಭರವಸೆ ಎಂದು ಮಂಗಳವಾರ ಕೇಂದ್ರ ಗೃಹಸಚಿವ ಅಮಿತ್‌ ಶಾ ತಿಳಿಸಿದರು.

ಮಹೇಂದ್ರಗಢ: ಕಾಂಗ್ರೆಸ್ ಕರ್ನಾಟಕದಲ್ಲಿ ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಿದಂತೆ ಹರ್ಯಾಣದಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಒಬಿಸಿ ಮೀಸಲಾತಿಯನ್ನು ಮುಸ್ಲಿಮಮರಿಗೆ ನೀಡುತ್ತದೆ. ಆದರೆ ಹರ್ಯಾಣದಲ್ಲಿ ಮುಸ್ಲಿಂ ಮೀಸಲಾತಿಗೆ ನಾವು ಅನುಮತಿ ನೀಡುವುದಿಲ್ಲ, ಇದು ನನ್ನ ಭರವಸೆ ಎಂದು ಮಂಗಳವಾರ ಕೇಂದ್ರ ಗೃಹಸಚಿವ ಅಮಿತ್‌ ಶಾ ತಿಳಿಸಿದರು.

ಇಲ್ಲಿ ಆಯೋಜಿಸಿದ್ದ ‘ಹಿಂದುಳಿದ ವರ್ಗಗಳ ಸಮ್ಮಾನ್ ಸಮ್ಮೇಳನ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿರೋಧಿ ಪಕ್ಷ ಎಂದು ಅವರು ಆರೋಪಿಸಿದರು.ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರ ಇತ್ತೀಚೆಗೆ ಹಿಂದುಳಿದ ವರ್ಗಗಳ ವಾರ್ಷಿಕ ಆದಾಯ ಮಿತಿಯನ್ನು 6 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ನೀಡಲು 1950 ರ ದಶಕದಲ್ಲಿ ರಚಿಸಲಾದ ಕಾಕಾ ಕಾಲೇಕರ್ ಆಯೋಗವನ್ನು ಉಲ್ಲೇಖಿಸಿದರು.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಲಿದ್ದು, ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.