ಕಾಂಗ್ರೆಸ್‌ ಅಧ್ಯಕ್ಷರಾಗಿ 2 ವರ್ಷ ಪೂರೈಸಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ : ಶುಭಾಶಯ

| Published : Oct 27 2024, 02:32 AM IST / Updated: Oct 27 2024, 04:54 AM IST

ಸಾರಾಂಶ

ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಚುಕ್ಕಾಣಿ ಹಿಡಿದು 2 ವರ್ಷ ಪೂರೈಸಿದ್ದಾರೆ. ಈ ನಿಮಿತ್ತ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿ ಪಕ್ಷದ ನಾಯಕರು ಶುಭಾಶಯ ಕೋರಿದ್ದಾರೆ.

ನವದೆಹಲಿ: ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಚುಕ್ಕಾಣಿ ಹಿಡಿದು 2 ವರ್ಷ ಪೂರೈಸಿದ್ದಾರೆ. ಈ ನಿಮಿತ್ತ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿ ಪಕ್ಷದ ನಾಯಕರು ಶುಭಾಶಯ ಕೋರಿದ್ದಾರೆ.

ರಾಹುಲ್‌ ಗಾಂಧಿ ಅಲ್ಲದೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ಖಜಾಂಚಿ ಅಜಯ್‌ ಮಾಕನ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಲ್ಕಾ ಲಾಂಬಾ ಸೇರಿ ಹಲವು ಗಣ್ಯರು ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ ಕೇಕ್‌ ಕತ್ತರಿಸಿ ಶುಭ ಹಾರೈಸಿದರು.

‘ನಿಮ್ಮ ನಾಯಕತ್ವವು ಜನರ ಸೇವೆ ಮಾಡುವ ಪಕ್ಷದ ಸಂಕಲ್ಪವನ್ನು ಬಲಪಡಿಸಿದೆ. ನಿಮ್ಮ ಹೋರಾಟ ಮತ್ತು ಅನುಭವ ನಮಗೆ ಸ್ಫೂರ್ತಿ. ಸಂವಿಧಾನ ಮತ್ತು ಸಾರ್ವಜನಿಕ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನಿಮ್ಮ ಮಾರ್ಗದರ್ಶನ ಮೌಲ್ಯಯುತವಾಗಿದೆ’ ಎಂದು ರಾಹುಲ್‌ ಗುಣಗಾನ ಮಾಡಿದರು.

ಖರ್ಗೆ ಅವರ ಅಧ್ಯಕ್ಷ ಅವಧಿಯಲ್ಲಿ ಪಕ್ಷವು ಲೋಕಸಭೆಯಲ್ಲಿ 52 ಸ್ಥಾನದಿಂದ 99ಕ್ಕೆ ಏರಿಕೆಯಾಗಿದೆ. ಜೊತೆಗೆ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡಿದೆ. ಜೊತೆಗೆ ಜಮ್ಮು-ಕಾಶ್ಮೀರದ ಸರ್ಕಾರದ ಆಡಳಿತದ ಭಾಗವಾಗಿದೆ.