ರಾಮ ಮಂದಿರ, ಮೋದಿ ಹೊಗಳಿದ್ದ ಆಚಾರ್ಯ ಕಾಂಗ್ರೆಸ್‌ನಿಂದ ವಜಾ

| Published : Feb 11 2024, 01:47 AM IST / Updated: Feb 11 2024, 12:14 PM IST

ಆಚಾರ್ಯ ಪ್ರಮೋದ್‌ ಕೃಷ್ಣಂ
ರಾಮ ಮಂದಿರ, ಮೋದಿ ಹೊಗಳಿದ್ದ ಆಚಾರ್ಯ ಕಾಂಗ್ರೆಸ್‌ನಿಂದ ವಜಾ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಮಂದಿರ ಉದ್ಘಾಟನೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂರನ್ನು ಕಾಂಗ್ರೆಸ್‌ 6 ವರ್ಷಗಳ ಕಾಲ ವಜಾ ಮಾಡಿದೆ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯನ್ನು ಹೊಗಳಿ ಕಾಂಗ್ರೆಸ್‌ ನಿಲುವನ್ನು ಟೀಕಿಸಿದ್ದ ಉತ್ತರ ಪ್ರದೇಶದ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂರನ್ನು ಪಕ್ಷ 6 ವರ್ಷದವರೆಗೆ ಉಚ್ಛಾಟಿಸಿದೆ.

ಪ್ರಮೋದ್‌ ಆಚಾರ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ್ದರು.ಅಲ್ಲದೇ ಹಲವು ಕಾಂಗ್ರೆಸ್‌ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದರು.

ಹೀಗಾಗಿ ಪಕ್ಷದಲ್ಲಿ ಅಶಿಸ್ತು ತೋರಿಸಿದ ಕಾರಣ ಅವರನ್ನು ಮುಂದಿನ 6 ವರ್ಷದವರೆಗೆ ವಜಾ ಮಾಡಲಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹೇಳಿದ್ದಾರೆ.

ಇವರು ಇತ್ತೀಚೆಗೆ ಉತ್ತರ ಪ್ರದೇಶದ ಕಲ್ಕಿ ದೇಗುಲ ಶಂಕುಸ್ಥಾಪನೆಗೆ ಪ್ರಧಾನಿ ಮೋದಿಯನ್ನು ಆಹ್ವಾನಿಸಿದ್ದರು.