ಸಾರಾಂಶ
ಲಡಾಖ್‌ನ ಚುಶೂಲ್‌ನಲ್ಲಿ ನಿರ್ಮಾಣ ಮಾಡಿದ್ದ ಯುದ್ಧ ಸ್ಮಾರಕವನ್ನು ಧ್ವಂಸ ಮಾಡಿರುವ ಸುದ್ದಿ ಬಹಳ ನೋವುಂಟು ಮಾಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
- ಲಡಾಖ್‌ನಲ ಚುಶೂಲ್ ಪ್ರದೇಶದಲ್ಲಿ ನಿರ್ಮಿಸಿದ್ದ ಸ್ಮಾರಕ
- 2021ರಲ್ಲಿ ಚೀನಾ ಜೊತೆಗಿನ ಮಾತುಕತೆ ಬಳಿಕ ಧ್ವಂಸ: ಖರ್ಗೆನವದೆಹಲಿ: ಚೀನಾದ ಆದೇಶಕ್ಕೆ ತಲೆಬಾಗಿ 1962 ಯುದ್ಧದಲ್ಲಿ ಮಡಿದ ಯೋಧರ ಸ್ಮರಣಾರ್ಥ ಗಡಿಯಲ್ಲಿ ನಿರ್ಮಿಸಿದ್ದ ಸ್ಮಾರಕ ಕೇಂದ್ರವನ್ನು ಕೇಂದ್ರ ಸರ್ಕಾರ ಧ್ವಂಸಗೊಳಿಸಿದೆ. ಈ ಮೂಲಕ ಯೋಧರಿಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಲಡಾಖ್‌ನ ಚುಶೂಲ್‌ನಲ್ಲಿ ನಿರ್ಮಾಣ ಮಾಡಿದ್ದ ಯುದ್ಧ ಸ್ಮಾರಕವನ್ನು ಧ್ವಂಸ ಮಾಡಿರುವ ಸುದ್ದಿ ಬಹಳ ನೋವುಂಟು ಮಾಡಿದೆ. 1962ರ ಯುದ್ಧದಲ್ಲಿ ಮಡಿದ ಭಾರತ ಮಾತೆಯ ವೀರ ಪುತ್ರ, ಪರಮವೀರ ಚಕ್ರ ಪಡೆದಿದ್ದ ಯೋಧ ಮೇಜರ್ ಶೈತಾನ್ ಸಿಂಗ್ ಅವರ ಸ್ಮರಣಾರ್ಥ ಈ ಸ್ಮಾರಕ ನಿರ್ಮಾಣ ಮಾಡಲಾಗಿತ್ತು. ವರದಿಗಳ ಪ್ರಕಾರ ಚೀನಾ ಜೊತೆಗಿನ ಮಾತುಕತೆಯ ಬಳಿಕ ಈ ಸ್ಮಾರಕವನ್ನು ಧ್ವಂಸ ಮಾಡಲಾಗಿದೆ. ಭಾರತಕ್ಕೆ ಸೇರಿದ ಸ್ಥಳ ಇದೀಗ ಬಫರ್ ಜೋನ್ ಆಗಿದೆ. ಆದರೆ ವಿದೇಶಾಂಗ ಸಚಿವಾಲಯ ಒಂದೇ ಒಂದು ಹೇಳಿಕೆಯನ್ನು ನೀಡಿಲ್ಲ’ ಎಂದು ಅವರು ಹೇಳಿದ್ದಾರೆ. 2014ರಿಂದ ಮೋದಿ ಹಾಗೂ ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಡುವೆ ಮಾತುಕತೆ ನಡೆಯುತ್ತಿದ್ದರೂ ಸಹ ಡೆಪ್ಸಾಂಗ್, ಪ್ಯಾಂಗೋಂಗ್ ತ್ಸೋ, ಡೆಮ್‌ಚೌಕ್ ಮತ್ತು ಗೋಗ್ರಾಗಳಲ್ಲಿ 2020ಕ್ಕಿಂತ ಮೊದಲಿನ ಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಸರ್ಕಾ ಏಕೆ ವಿಫಲವಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಶೈತಾನ್ ಸಿಂಗ್ ಅವರ ನೇತೃತ್ವದಲ್ಲಿ ಹುತಾತ್ಮರಾದ 113 ಮಂದಿ ಯೋಧರು ಈ ದೇಶದ ಹೆಮ್ಮೆ. ಅವರ ಸ್ಮಾರಕವನ್ನು ಧ್ವಂಸ ಮಾಡುವ ಮೂಲಕ ಬಿಜೆಪಿ ಮತ್ತೊಮ್ಮೆ ತಮ್ಮ ನಕಲಿ ದೇಶಭಕ್ತಿಯನ್ನು ಪ್ರದರ್ಶಿಸಿದೆ. ಈ ಸರ್ಕಾರ ಚೀನಾದ ಯೋಜನೆಗಳಿಗೆ ಬಲಿಯಾಗಿದ್ದು, ನೋಡಿ ಬೇಸರವಾಗಿದೆ ಎಂದು ಅವರು ಹೇಳಿದ್ದಾರೆ.