ಕಾಂಗ್ರೆಸ್‌ ಮೀಸಲಾತಿ ವಿರೋಧಿ : ರಾಹುಲ್ ಅಮೆರಿಕದಲ್ಲಿ ನೀಡಿರುವ ಮೀಸಲಾತಿ ಕುರಿತ ಹೇಳಿಕೆ ವಿರುದ್ಧಅಮಿತ್‌ ಶಾ ತರಾಟೆ

| Published : Sep 12 2024, 06:06 AM IST

Amith Shah
ಕಾಂಗ್ರೆಸ್‌ ಮೀಸಲಾತಿ ವಿರೋಧಿ : ರಾಹುಲ್ ಅಮೆರಿಕದಲ್ಲಿ ನೀಡಿರುವ ಮೀಸಲಾತಿ ಕುರಿತ ಹೇಳಿಕೆ ವಿರುದ್ಧಅಮಿತ್‌ ಶಾ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದಲ್ಲಿ ಮೀಸಲಾತಿ ಕುರಿತು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ.

 ನವದೆಹಲಿ : ಪ್ರತಿಪಕ್ಷ ನಾಯಕ ರಾಹುಲ್ ಅಮೆರಿಕದಲ್ಲಿ ನೀಡಿರುವ ಮೀಸಲಾತಿ ಕುರಿತ ಹೇಳಿಕೆ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ರಾಹುಲ್ ಮಾತಿಗೆ ಅಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಬಿಜೆಪಿ ಇರುವವರೆಗೂ ಮೀಸಲಾತಿ ಹಾಗೂ ದೇಶದ ಭದ್ರತೆಯ ಜೊತೆಗೆ ಯಾರಿಗೂ ಆಟವಾಡಲು ಬಿಡುವುದಿಲ್ಲ. ರಾಹುಲ್ ಹೇಳಿಕೆಯಿಂದ ಮತ್ತೊಮ್ಮೆ ಕಾಂಗ್ರೆಸ್‌ನ ಮೀಸಲು-ವಿರೋಧಿ ಮುಖ ಅನಾವರಣಗೊಂಡಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ, 'ಭಾರತವು ಎಲ್ಲರಿಗೂ ಅವಕಾಶಗಳನ್ನು ನೀಡುವ ನ್ಯಾಯಯುತ ಸ್ಥಳ ವಾಗಬಹುದು. ಸದ್ಯಕ್ಕೆ ಆ ಕಾಲ ಬಂದಿಲ್ಲ' ಎಂದು ಹೇಳಿದರು. ಇದಕ್ಕೆ ಅಮಿತ್ ಶಾ, ರಾಜನಾಥ ಸಿಂಗ್ ಸೇರಿ ಅನೇಕ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಎಂ ಮೋದಿಯನ್ನ ನನ್ನ ವೈರಿಯೆಂದು ಪರಿಗಣಿಸಿಲ್ಲ ಎಂದ ರಾಹುಲ್ ಗಾಂಧಿ

ಬಿಜೆಪಿಯು ಮೀಸಲಾತಿಯನ್ನು ರದ್ದುಗೊಳಿಸುತ್ತದೆ ಎಂದು ನಿರಂತರ ಆರೋಪ ಮಾಡುತ್ತಾ ಬಂದಿದ್ದ ಕಾಂಗ್ರೆಸ್ ವಿರುದ್ಧ ರಾಹುಲ್ ಹೇಳಿಕೆಯನ್ನು ಆಸ್ತ್ರ ಮಾಡಿಕೊಳ್ಳಲು ಯತ್ನಿಸಿದ್ದಾರೆ.

ರಾಹುಲ್ ಹೇಳಿದ್ದೇನು?

ಭಾರತವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ನ್ಯಾಯಯುತ ಸ್ಥಳವಾದಾಗ ಮೀಸಲಾತಿ ರದ್ದುಪಡಿಸ ಬಹುದು. ಸದ್ಯಕ್ಕೆ ಆ ಕಾಲ ಬಂದಿಲ್ಲ.

ಭಾರತದಲ್ಲಿ ಸಿಖ್ಖರು ಪೇಟ ಧರಿಸಲಿಕ್ಕೂ ಆಗ್ತಿಲ್ಲ, ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಎಂಬುದಿಲ್ಲ: ರಾಹುಲ್‌ ಗಾಂಧಿ

ನಾನು ಮೀಸಲಾತಿಯ ವಿರೋಧಿಯಲ್ಲ:

ಮೀಸಲಾತಿ ಕುರಿತ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಮೀಸಲು ವಿರೋಧಿಯಲ್ಲ, ಕಾಂಗ್ರೆಸ್ ಮೀಸಲಾತಿ ಹೆಚ್ಚಿಸಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಇಂದು, ನಾಳೆ ರಾಹುಲ್ ಪ್ರತಿಕೃತಿ ದಹಿಸಿ ರಾಜ್ಯ ಬಿಜೆಪಿ ಹೋರಾಟ

ಬೆಂಗಳೂರು: ಮಿಸಲಾತಿ ರದ್ದುಪಡಿಸು ವುದಾಗಿ ಅಮೆರಿಕದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ರಾಜ್ಯಾ ದ್ಯಂತ ಗುರುವಾರ ಮತ್ತು ಶುಕ್ರವಾರ ಅವರ ಪ್ರತಿಕೃತಿ ದಹಿಸಿ ಪ್ರತಿಭಟ ಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ. ರಾಹುಲ್ ತಮ್ಮ ಮನದಾಳದ ಮಾತು ಹೇಳಿದ್ದಾರೆ ಎಂದಿದ್ದಾರೆ.