ಹಿಂದೂಗಳು ವಿರುದ್ಧ ಕಾಂಗ್ರೆಸ್ ಸಂಚು: ಮೋದಿ ಕಿಡಿ

| Published : Jul 03 2024, 12:22 AM IST

ಹಿಂದೂಗಳು ವಿರುದ್ಧ ಕಾಂಗ್ರೆಸ್ ಸಂಚು: ಮೋದಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆಯಲ್ಲಿ ಮಂಗಳವಾರ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು, ‘ಹಿಂದೂ ನಾಯಕರೆಂದು ಬಿಂಬಿಸಿಕೊಳ್ಳುವವರು ಹಿಂಸೆಯಲ್ಲಿ ತೊಡಗಿದ್ದಾರೆ’ ಎಂದು ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಲೋಕಸಭೆಯಲ್ಲಿ ಮಂಗಳವಾರ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು, ‘ಹಿಂದೂ ನಾಯಕರೆಂದು ಬಿಂಬಿಸಿಕೊಳ್ಳುವವರು ಹಿಂಸೆಯಲ್ಲಿ ತೊಡಗಿದ್ದಾರೆ’ ಎಂದು ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಹಿಂದೂಗಳು ಹಿಂಸಾಕೋರರು ಎಂದು ಬಿಂಬಿಸಲು ಯತ್ನ ನಡೆದಿದೆ’ ಎಂದು ಕಾಂಗ್ರೆಸ್‌ಗೆ ಪರೋಕ್ಷ ಚಾಟಿ ಬೀಸಿದ್ದಾರೆ.ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಗೆ ಸುದೀರ್ಘ 2 ತಾಸು ಕಾಲ ಭಾಷಣ ಮಾಡಿ ಉತ್ತರ ನೀಡಿದ ಮೋದಿ, ‘ಹಿಂದೂಗಳ ಮೇಲೆ ಸುಳ್ಳು ಆರೋಪ ಹೊರಿಸುವ ದೊಡ್ಡ ಸಂಚೊಂದು ರೂಪಿಸಲಾಗಿದೆ. ಹಿಂದೂಗಳು ಹಿಂಸಾವಾದಿಗಳು ಎಂದು ಸುಳ್ಳು ಆರೋಪ ಮಾಡಲಾಗತ್ತಿದೆ. ಇದು ನಿಮ್ಮ ಸಂಸ್ಕಾರ, ಗುಣ ನಡತೆ, ನಿಮ್ಮ ಆಲೋಚನೆ, ನಿಮ್ಮ ದ್ವೇಷ, ಹಿಂದೂಗಳ ಕುರಿತಾದ ನಿಮ್ಮ ಉದ್ದೇಶವನ್ನು ತೋರಿಸುತ್ತಿದೆ. ಈ ದೇಶ ಮುಂದಿನ ಶತಶತಮಾನಗಳ ಕಾಲ ಇದನ್ನು ಮರೆಯುವುದಿಲ್ಲ’ ಎಂದು ರಾಹುಲ್‌ ಗಾಂಧಿ ಭಾಷಣವನ್ನು ಉದ್ದೇಶಿಸಿ ಎಚ್ಚರಿಸಿದರು.

ಸಂವಿಧಾನ:ಯಾರು ಸಂವಿಧಾನದ ಹೆಸರಲ್ಲಿ ನೃತ್ಯ ಮಾಡುತ್ತಿದ್ದಾರೋ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನ ಸ್ಥಾಪನೆಗೆ ಪ್ರಯತ್ನಿಸಲಿಲ್ಲ. ಈ ಮೂಲಕ ಅವರು ಸಂವಿಧಾನದ ನಿರ್ಮಾತೃ ಬಿ.ಆರ್‌. ಅಂಬೇಡ್ಕರ್ ಅವರನ್ನು ಅವಮಾನಿಸಿದರು ಎಂದು ಕಾಂಗ್ರೆಸ್‌ ವಿರುದ್ಧ ಮೋದಿ ಹರಿಹಾಯ್ದರು.ಅರಾಜಕತೆ ಸೃಷ್ಟಿಗೆ ಯತ್ನ:ದೇಶದ ಒಂದು ಭಾಗವನ್ನು ಇನ್ನೊಂದು ಭಾಗದೊಂದಿಗೆ ಹೋಲಿಸುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ಮಾಡುತ್ತಿದೆ. ಜೊತೆಗೆ ಆರ್ಥಿಕ ವಿಷಯಗಳನ್ನು ಮುಂದಿಟ್ಟುಕೊಂಡೂ ದೇಶದಲ್ಲಿ ದ್ವೇಷ ಹಬ್ಬಿಸುವ ಕೆಲಸ ಮಾಡುತ್ತಿದೆ. ರಾಜ್ಯಗಳಲ್ಲಿ ಅವರು ಜಾರಿಗೊಳಿಸಿರುವ ಕೆಲ ನೀತಿಗಳು ರಾಜ್ಯವನ್ನು ಆರ್ಥಿಕ ಅವ್ಯವಸ್ಥೆಯತ್ತ ನೂಕುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್‌ ಅವಧಿಯಲ್ಲಿ ಸೇನೆ ಸೇನೆ ದುರ್ಬಲ:

ನವದೆಹಲಿ: ಸೇನೆಯ ಅಗ್ನಿವೀರ ಯೋಜನೆ ಬಗ್ಗೆ ಸುಳ್ಳು ಹರಡಲು ಕಾಂಗ್ರೆಸ್ ಯತ್ನಿಸಉ್ತತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಸೇನೆಯ ಅಗ್ನಿವೀರ ಯೋಜನೆ ಅಡಿ ಸರ್ಕಾರ ಹಂಗಾಮಿ ಸೈನಿಕರನ್ನು ನೇಮಿಸುತ್ತಿದ್ದು, ಅವರನ್ನು ಬಳಸಿ ಬಿಸಾಕುವ ಯೋಜನೆ ಇದು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ದೂರಿದ್ದರು.

ಈ ಆರೋಪ ಸುಳ್ಳು ಎಂದು ಉತ್ತರ ನೀಡಿದ ಮೋದಿ, ‘ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ದೇಶದಲ್ಲಿ ಭ್ರಷ್ಟಾಚಾರದ ಸಂಪ್ರದಾಯವನ್ನು ಕಾಂಗ್ರೆಸ್‌ ಆರಂಭಿಸಿತ್ತು. ಅದು ಜೀಪ್‌ ಹಗರಣವಾಗಿರಬಹುದು, ಸಬ್‌ಮರೀನ್‌ ಅಥವಾ ಬೋಫೋರ್ಸ್‌ ಹಗರಣವೇ ಆಗಿರಬಹುದು. ಈ ಎಲ್ಲಾ ಹಗರಣಗಳು ತನ್ನ ಸೇನೆಯ ಸಾಮರ್ಥ್ಯ ವೃದ್ಧಿಯನ್ನು ಹೆಚ್ಚಿಸುವ ಬದಲು ಕುಂಠಿತ ಮಾಡಿದವು. ಒಂದೊಮ್ಮೆ ಕಾಂಗ್ರೆಸ್‌ ಆಡಳಿತದಲ್ಲಿ ನಮ್ಮ ಯೋಧರ ಬಳಿ ಬುಲೆಟ್‌ಫ್ರೂಫ್‌ ಜಾಕೆಟ್‌ ಕೂಡಾ ಇರಲಿಲ್ಲ. ಹೀಗೆ ಅಧಿಕಾರದಲ್ಲಿ ಇದ್ದಾಗ ಸೇನೆಯನ್ನು ದುರ್ಬಲಗೊಳಿಸಿದ ಕಾಂಗ್ರೆಸ್‌ ಅಧಿಕಾರದಿಂದ ಕೆಳಗೆ ಇಳಿದ ಬಳಿಕವೂ ಸೇನೆಯನ್ನು ದುರ್ಬಲಗೊಳಿಸುವ ಯತ್ನವನ್ನು ಮುಂದುವರೆಸಿತು. ಅವರು ಅಧಿಕಾರದಲ್ಲಿ ಇದ್ದಾಗ ಸೇನೆಗೆ ಯುದ್ಧ ವಿಮಾನ ಖರೀದಿಸಲಿಲ್ಲ. ಆದರೆ ನಾವು ಖರೀದಿ ಮಾಡಿದಾಗ ಎಲ್ಲಾ ರೀತಿಯ ಸಂಚಿನ ಆರೋಪಗಳನ್ನು ಸೃಷ್ಟಿಸಿತು. ಯುದ್ಧ ವಿಮಾನಗಳು ಭಾರತೀಯ ವಾಯುಪಡೆ ಸೇರದಂತೆ ಎಲ್ಲಾ ಪ್ರಯತ್ನಗಳನ್ನೂ ಅದು ಮಾಡಿತು’ ಎಂದು ಹರಿಹಾಯ್ದರು.

==ನಮ್ಮದು ಸಂತುಷ್ಟೀಕರಣ, ತುಷ್ಟೀಕರಣವಲ್ಲ: ಮೋದಿನವದೆಹಲಿ: ತಮ್ಮ 10 ವರ್ಷದ ಆಡಳಿತವನ್ನು ಯುಪಿಎದ 10 ವರ್ಷಗಳ ಸಾಧನೆ ಜೊತೆ ಹೋಲಿಸಿದ ಪ್ರಧಾನಿ ಮೋದಿ, ‘ವಿಪಕ್ಷ ಸ್ಥಾನದಲ್ಲಿ ಕೂರುವುದೇ ಕಾಂಗ್ರೆಸ್‌ಗೆ ಸಿಕ್ಕಾ ಜನಾದೇಶ. ಈ ದೇಶ ಸುದೀರ್ಘ ಅವಧಿಗೆ ಓಲೈಕೆ ರಾಜಕಾರಣ ನೋಡಿದೆ. ಅದರ ಬಳಿಕ ನಾವು ಸಂತುಷ್ಟೀಕರಣ ರಾಜಕಾರಣ ಮಾಡಿದ್ದೆವೆಯೇ ಹೊರತೂ ತುಷ್ಟೀಕರಣದ ರಾಜಕಾರಣ ಮಾಡಲಿಲ್ಲ. ನಮ್ಮ ಧ್ಯೇಯ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವುದೇ ಹೊರತೂ ಯಾರನ್ನೂ ಓಲೈಸುವುದಲ್ಲ ಎಂದು ಹೇಳಿದರು.‘ಕಾಂಗ್ರೆಸ್‌ ಇಷ್ಟು ಸ್ಥಾನ ಗೆಲ್ಲಲು ಕಾರಣ ಮಿತ್ರಪಕ್ಷಗಳು. ಆದರೆ 2014ರ ಚುನಾವಣೆ ಬಳಿಕ ಪ್ರತಿಯೊಂದು ಚುನಾವಣೆಯಲ್ಲೂ ಮಿತ್ರರ ಮತವನ್ನು ಕಸಿದಿದ್ದೇ ಕಾಂಗ್ರೆಸ್‌ ಸಾಧನೆ. ಕಾಂಗ್ರೆಸ್‌ ಪರೋಪಜೀವಿ ಎಂಬುದು ಈ ಚುನಾವಣೆಯಲ್ಲೂ ಸಾಬೀತಾಗಿದೆ’ ಎಂದು ಮೋದಿ ಕಿಡಿಕಾರಿದರು.