ಸಾರಾಂಶ
ಲೋಕಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ತನ್ನ ಆರನೇ ಪಟ್ಟಿ ಪ್ರಕಟಿಸಿದ್ದು, ಮೂರು ರಾಜ್ಯಗಳ 10 ಮಂದಿಗೆ ಟಿಕೆಟ್ ಘೋಷಿಸಿದೆ.
ನವದೆಹಲಿ: ಲೋಕಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ತನ್ನ ಆರನೇ ಪಟ್ಟಿ ಪ್ರಕಟಿಸಿದ್ದು, ಮೂರು ರಾಜ್ಯಗಳ 10 ಮಂದಿಗೆ ಟಿಕೆಟ್ ಘೋಷಿಸಿದೆ.
ಪ್ರಮುಖವಾಗಿ ದೆಹಲಿಯ ಎಲ್ಲ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು, ಈಶಾನ್ಯ ದೆಹಲಿಯಿಂದ ಜೆಎನ್‌ಯು ವಿದ್ಯಾರ್ಥಿ ನಾಯಕನಾಗಿ ಖ್ಯಾತಿ ಗಳಿಸಿದ್ದ ಯುವ ಮುಖಂಡ ಕನ್ಹಯ್ಯ ಕುಮಾರ್‌ಗೆ ಟಿಕೆಟ್ ನೀಡಿದೆ.
ಇನ್ನುಳಿದಂತೆ ಪಂಜಾಬ್‌ನಲ್ಲೂ ಸಹ 6 ಕ್ಷೇತ್ರಗಳಿಗೆ ಟಿಕೆಟ್ ಪ್ರಕಟಿಸಿದ್ದು, ಜಲಂಧರ್ ಮೀಸಲು ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿಗೆ ಟಿಕೆಟ್ ಪ್ರಕಟಿಸಿದೆ. ಇದರ ಜೊತೆಗೆ ಉತ್ತರಪ್ರದೇಶದ ಅಲಹಾಬಾದ್‌ನಿಂದ ಉಜ್ವಲ್ ರೇವತಿ ರಮಣ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿದೆ.