ಸಾರಾಂಶ
ನವದೆಹಲಿ: ಭಾರತ ಅದೆಷ್ಟೇ ಅಲ್ಲಗೆಳೆದರೂ ಭಾರತ - ಪಾಕ್ ಕದನ ನಿಲ್ಲಿಸಿದ್ದು ನಾನೇ ಎಂದು ಬೀಗುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಪೆಟ್ಟು ನೀಡಲು ಭಾರತದಲ್ಲಿ ಅಮೆರಿಕದ ಫಾಸ್ಟ್ ಫುಡ್ ಮಳಿಗೆ ಮೆಕ್ ಡೊನಾಲ್ಡ್ಸ್ ನಿಷೇಧಿಸಬೇಕು ಎಂದು ಕಾಂಗ್ರೆಸ್ ಸಂಸದ ದೀಪೆಂದರ್ ಸಿಂಗ್ ಹೂಡಾ ಸಂಸತ್ತಿನಲ್ಲಿ ಆಗ್ರಹಿಸಿದರು.ಸಂಸತ್ತಿನಲ್ಲಿ ಮಾತನಾಡಿದ ಅವರು, ‘ ಟ್ರಂಪ್ ಪದೇ ಪದೇ ಹೇಳುತ್ತಿದ್ದರೂ ಅಮೆರಿಕದ ಅಧ್ಯಕ್ಷರು ಸುಳ್ಳು ಹೇಳಿದ್ದಾರೆ ಎಂದು ಕೇಂದ್ರ ಸ್ಪಷ್ಟವಾಗಿ ಹೇಳುತ್ತಿಲ್ಲ. ಭಾರತದ ಜೊತೆಗೆ ಯಾವ ಸಂಬಂಧ ಬೇಕು ಎಂದು ಅಮೆರಿಕ ಮೊದಲು ನಿರ್ಧರಿಸಬೇಕು. ಅಮೆರಿಕವು ಭಾರತವನ್ನು ಪಾಕಿಸ್ತಾನದೊಂದಿಗೆ ನವೀಕರಿಸಲು ಸಾಧ್ಯವಿಲ್ಲ. ಕೇಂದ್ರದ ಮುಂದೆ ಆಯ್ಕೆ ಗಳಿವೆ. ಒಂದೋ ಅಮೆರಿಕ ಜೊತೆ ಮಾತನಾಡಿ ಟ್ರಂಪ್ ಸುಳ್ಳು ಹೇಳಿಕೆಗಳನ್ನು ನೀಡದಂತೆ ನೋಡಿ ಕೊಳ್ಳುವುದು. ಇಲ್ಲವೋ ಭಾರತದಲ್ಲಿ ಮೆಕ್ ಡೊನಾಲ್ಡ್ಸ್ ನಿಷೇಧಿಸುವುದು. ಒಂದೇ ಸಮಯದಲ್ಲಿ ಎರಡು ಕುದುರೆಗಳ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.