ಸಾರಾಂಶ
ಬಾಹ್ಯಾಕಾಶಕ್ಕೆ ಮೇಲ್ವರ್ಗದ ಶುಭಾಂಶು ಶುಕ್ಲಾ ಅವರ ಬದಲಿಗೆ ದಲಿತರನ್ನು ಕಳಿಸಬೇಕಿತ್ತು ಎಂದು ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕ ಉದಿತ್ ರಾಜ್ ಈಗ ರಾಹುಲ್ ಗಾಂಧಿ ಅವರು ಎರಡನೇ ಅಂಬೇಡ್ಕರ್ ಎಂದು ಹೇಳಿದ್ದಾರೆ.
ನವದೆಹಲಿ: ಬಾಹ್ಯಾಕಾಶಕ್ಕೆ ಮೇಲ್ವರ್ಗದ ಶುಭಾಂಶು ಶುಕ್ಲಾ ಅವರ ಬದಲಿಗೆ ದಲಿತರನ್ನು ಕಳಿಸಬೇಕಿತ್ತು ಎಂದು ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕ ಉದಿತ್ ರಾಜ್ ಈಗ ರಾಹುಲ್ ಗಾಂಧಿ ಅವರು ಎರಡನೇ ಅಂಬೇಡ್ಕರ್ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಉದಿತ್, ‘ಒಬಿಸಿಗಳೇ ಕಾಲ ಕಳೆದುಹೋಗುವ ಮುನ್ನ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ. ಅವರು 2ನೇ ಅಂಬೇಡ್ಕರ್. ಅವರು ನಿಮ್ಮನ್ನು ಉದ್ಧಾರ ಮಾಡಲಿದ್ದಾರೆ’ ಎಂದಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ನಿಜವಾದ ಅಂಬೇಡ್ಕರ್ ಅವರನ್ನು ಗೌರವಿಸಿದ ಕಾಂಗ್ರೆಸ್ ಈಗ 2ನೇ ಅಂಬೇಡ್ಕರ್ ಆಗಿ ರಾಹುಲ್ ಗಾಂಧಿ ಅವರನ್ನು ಪ್ರತಿಬಿಂಬಿಸುತ್ತಿದೆ. ಇದು ದಲಿತರಿಗೆ, ಸಂವಿಧಾನಕ್ಕೆ ಮಾಡಿದ ಅವಮಾನ’ ಎಂದಿದ್ದಾರೆ.