90ರ ದಶಕದಲ್ಲಿ ಕಾಂಗ್ರೆಸ್‌ ದಲಿತರು, ಒಬಿಸಿಗಳನ್ನು ಕಡೆಗಣಿಸಿತ್ತು : ರಾಹುಲ್‌ ಗಾಂಧಿ

| N/A | Published : Jan 31 2025, 12:46 AM IST / Updated: Jan 31 2025, 05:13 AM IST

rahul gandhi mp

ಸಾರಾಂಶ

ನವದೆಹಲಿ: ಕಾಂಗ್ರೆಸ್‌ ಪಕ್ಷವು 90ರ ದಶಕದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ನವದೆಹಲಿ: ಕಾಂಗ್ರೆಸ್‌ ಪಕ್ಷವು 90ರ ದಶಕದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ಇಲ್ಲಿ ಆಯೋಜಿತವಾಗಿದ್ದ ದಲಿತ ನಾಯಕರ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ರಾಹುಲ್‌, ‘ಕೇವಲ ರಾಜಕೀಯದಲ್ಲಿ ದಲಿತ ಪ್ರತಿನಿಧಿಗಳನ್ನು ಹೊಂದುವುದು ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಎಲ್ಲರಿಗೂ ಸಾಂಸ್ಥಿಕವಾಗಿ ಮತ್ತು ಆರ್ಥಿಕವಾಗಿ ಸಮಾನ ಪಾಲು ದೊರೆಯಬೇಕು. ಈ ಸಮಪಾಲು ನಮ್ಮ ಪಕ್ಷ ಸಂಪೂರ್ಣವಾಗಿ ಅಧಿಕಾರಕ್ಕೆ ಬಂದಾಗ ದೊರೆಯಲಿದೆ. ಒಮ್ಮೆ ಕಾಂಗ್ರೆಸ್‌ನ ಮೂಲ ಆಧಾರವಾದ ದಲಿತರು ಮತ್ತು ಒಬಿಸಿ ಬೆಂಬಲ ಮರಳಿದರೆ ಆಗ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಓಡಬೇಕಾಗುತ್ತದೆ. ಅಂಥ ದಿನಗಳು ಶೀಘ್ರದಲ್ಲೇ ಬರಲಿದೆ’ ಎಂದು ಹೇಳಿದರು.

ಇದೇ ವೇಳೆ ಇಂದಿರಾ ಗಾಂಧಿ ಅವಧಿಯಲ್ಲಿ ದಲಿತರು ಮತ್ತು ಹಿಂದುಳಿದವರ ಮೇಲೆ ಸಂಪೂರ್ಣ ವಿಶ್ವಾಸ ಇತ್ತು. ಆದರೆ ಇದು 90ರ ದಶಕದಲ್ಲಿ ಸುಳ್ಳಾಯಿತು. ಪಕ್ಷದ ನ್ಯೂನ್ಯತೆ ತೊಡಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ನಾನು ಬಜೆಟ್‌ ವೇಳೆ ಹೇಳಿದಂತೆ ದೇಶದಲ್ಲಿ ಶೇ.50ರಷ್ಟು ಹಿಂದುಳಿದ ಜನರಿದ್ದಾರೆ. ಆದರೆ ಅವರಿಗೆ ಕೇವಲ ಶೇ.5ರಷ್ಟು ಪಾಲು ದೊರೆಯುತ್ತಿದೆ. ದಲಿತರ ಪಾಲು ಶೇ.15ರಷ್ಟಿದ್ದು, ಅವರಿಗೆ ಕೇವಲ ಶೇ.1ರಷ್ಟು ಪಾಲು ದೊರೆಯುತ್ತಿದೆ. ಸಮಸ್ಯೆ ಬಗೆಹರಿಯಬೇಕಾದರೆ ಎಲ್ಲರಿಗೂ ಸಮಪಾಲು ದೊರೆಯಬೇಕು ಎಂದು ಹೇಳಿದರು.