ಸಾರಾಂಶ
ಸಂವಿಧಾನ ರಕ್ಷಣೆಗಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಸಂವಿಧಾನದ ಖಾಲಿ ಪ್ರತಿಗಳನ್ನು ವಿತರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಮುಂಬೈ: ಸಂವಿಧಾನ ರಕ್ಷಣೆಗಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಸಂವಿಧಾನದ ಖಾಲಿ ಪ್ರತಿಗಳನ್ನು ವಿತರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
‘ಭಾರತದ ಸಂವಿಧಾನ’ ಎಂದು ಬರೆಯಲಾಗಿರುವ ಪುಸ್ತಕದಲ್ಲಿ ಪೀಠಿಕೆಯನ್ನು ಹೊರತುಪಡಿಸಿ ಉಳಿದೆಲ್ಲಾ ಪುಟಗಳು ಖಾಲಿಯಾಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ರಾಜ್ಯ ಬಿಜೆಪಿ, ‘ಕಾಂಗ್ರೆಸ್ ಭಾರತದ ಸಂವಿಧಾನವನ್ನು ಹೀಗೆ ಅಳಿಸಬಯಸಿದೆ. ಡಾ. ಬಿ.ಆರ್. ಅಂಬೇಡ್ಕರ್ ರಚಿತ ಎಲ್ಲಾ ಕಾನೂನುಗಳನ್ನೂ ತೆಗೆದುಹಾಕಲಾಗಿದೆ. ಆದ್ದರಿಂದಲೇ ಮೀಸಲಾತಿ ತೆಗೆದುಹಾಕುವ ಬಗ್ಗೆ ರಾಹುಲ್ ಮಾತಾಡುತ್ತಾರೆ’ ಎಂದು ಟೀಕಿಸಿದೆ. ಜೊತೆಗೆ, ಸಂವಿಧಾನವು ಚುನಾವಾಣೆಯ ವಿಷಯವಲ್ಲ. ಅದು ದೇಶವಾಸಿಗಳ ಜೀವನದ ಅಡಿಪಾಯ ಎಂದು ಹೇಳಿದೆ.
ಸಂವಿಧಾನದ ಪ್ರತಿ ಕೆಂಪು ಬಣ್ಣದಲ್ಲಿದ್ದುದನ್ನು ಗಮನಿಸಿದ ಡಿಸಿಎಂ ಫಡ್ನವೀಸ್, ‘ಇದು ನಗರ ನಕ್ಸಲರು ಹಾಗೂ ಅರಾಜಕತಾವಾದಿಗಳ ಕಡೆಗಿನ ಒಲವಿನ ಸಂಕೇತ’ ಎಂದಿದ್ದಾರೆ.