ಇನ್ನೂ 20 ವರ್ಷ ನೀವು ವಿಪಕ್ಷದಲ್ಲಿ: ಕಾಂಗ್ರೆಸ್‌ಗೆ ಶಾ ಟಾಂಗ್

| N/A | Published : Jul 29 2025, 03:52 AM IST

Amit Shah

ಸಾರಾಂಶ

ಸೋಮವಾರ ಲೋಕಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು

ನವದೆಹಲಿ: ಸೋಮವಾರ ಲೋಕಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ದೇಶದ ವಿದೇಶಾಂಗ ಸಚಿವರ ಮಾತನ್ನು ನಂಬುವುದಕ್ಕಿಂತ ಬೇರೆ ದೇಶವನ್ನು ನಂಬುವುದೇ ಉತ್ತಮ. ನೀವು ಹೀಗೆ ಮಾಡಿದ್ದಕ್ಕೇ ವಿಪಕ್ಷದಲ್ಲಿದ್ದೀರಿ. ಮುಂದಿನ 20 ವರ್ಷವೂ ಅಲ್ಲೇ ಇರುತ್ತೀರಿ’ ಎಂದು ಛೇಡಿಸಿದರು.

ಜೈಶಂಕರ್ ಅವರ ಭಾಷಣಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸಿದಾಗ, ಶಾ ಎದ್ದುನಿಂತು, ‘ಅವರಿಗೆ (ವಿರೋಧ ಪಕ್ಷಕ್ಕೆ) ಭಾರತದ ವಿದೇಶಾಂಗ ಸಚಿವರ ಮೇಲೆ ನಂಬಿಕೆ ಇಲ್ಲ, ಆದರೆ ಅವರಿಗೆ ಬೇರೆ ಯಾವುದೋ ದೇಶದ ಮೇಲೆ ನಂಬಿಕೆ ಇದೆ. ಅವರ ಪಕ್ಷದಲ್ಲಿ ವಿದೇಶಿಯರ ಪ್ರಾಮುಖ್ಯತೆ ನನಗೆ ಅರ್ಥವಾಗುತ್ತದೆ, ಆದರೆ ಅವರು ಇದನ್ನು ಸದನದ ಕಲಾಪಗಳ ಮೇಲೆ ಹೇರಬೇಕು ಎಂದು ಅರ್ಥವಲ್ಲ" ಎಂದು ಹೇಳಿದರು.

‘ಅವರು ಅಲ್ಲಿ (ವಿರೋಧ ಪಕ್ಷದ ಪೀಠಗಳು) ಕುಳಿತಿರುವುದಕ್ಕೆ ಇದೇ ಕಾರಣ, ಮತ್ತು ಮುಂದಿನ 20 ವರ್ಷಗಳ ಕಾಲ ಅಲ್ಲಿಯೇ ಕುಳಿತುಕೊಳ್ಳುತ್ತಾರೆ’ ಎಂದು ಗೃಹ ಸಚಿವರು ಟಾಂಗ್‌ ನೀಡಿದರು.

Read more Articles on