ಕೇರಳದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ 8 ದಿನ ಕಳೆದರೂ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವಿಫಲವಾಗಿದೆ. ಈ ನಡುವೆ ಸಿಎಂ ಹುದ್ದೆ ರೇಸ್‌ನಲ್ಲಿದ್ದ ಚೆನ್ನಿತ್ತಲ ರೇಸಿನಿಂದ ಹಿಂದೆ ಸರಿದಿದ್ದು, ಇದೀಗ ಕಣದಲ್ಲಿ ವಿ.ಡಿ.ಸತೀಶನ್ ಮತ್ತು ವೇಣುಗೋಪಾಲ್ ಮಾತ್ರ ಉಳಿದುಕೊಂಡಿದ್ದಾರೆ.
- ಕೇರಳ ವಿಧಾನಸಭೆಯ 140 ಸ್ಥಾನಗಳ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ 102 ಸ್ಥಾನ- ಬಹುಮತವಿದ್ದರೂ ಸಿಎಂ ಆಯ್ಕೆ ಕಠಿಣ. ಸತೀಶನ್, ಚೆನ್ನಿತ್ತಲ, ವೇಣುಗೋಪಾಲ್ ಮಧ್ಯೆ ಪೈಪೋಟಿ- ಶೇ.80ರಷ್ಟು ಶಾಸಕರ ಬೆಂಬಲ ವೇಣು ಪರ. ವರಿಷ್ಠರಿಗೂ ವೇಣುಗೋಪಾಲ್ ಬಗ್ಗೆಯೇ ಒಲವು- ಆದರೆ ರಾಜ್ಯದಲ್ಲಿ ಎಡರಂಗ ವಿರುದ್ಧ ಹೋರಾಟ ನಡೆಸಿದ್ದ ಸತೀಶನ್‌ರಿಂದ ಸಿಎಂ ಸ್ಥಾನಕ್ಕೆ ಪಟ್ಟು- ಹೈಕಮಾಂಡ್‌ಗೆ ಇಕ್ಕಟ್ಟು. ಬೇಗ ಮುಖ್ಯಮಂತ್ರಿ ಆಯ್ಕೆ ಮಾಡುವಂತೆ ಮಿತ್ರಪಕ್ಷ ಐಯುಎಂಎಲ್ ಒತ್ತಡತಿರುವನಂತಪುರ: ಕೇರಳದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ 8 ದಿನ ಕಳೆದರೂ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವಿಫಲವಾಗಿದೆ. ಈ ನಡುವೆ ಸಿಎಂ ಹುದ್ದೆ ರೇಸ್‌ನಲ್ಲಿದ್ದ ಚೆನ್ನಿತ್ತಲ ರೇಸಿನಿಂದ ಹಿಂದೆ ಸರಿದಿದ್ದು, ಇದೀಗ ಕಣದಲ್ಲಿ ವಿ.ಡಿ.ಸತೀಶನ್ ಮತ್ತು ವೇಣುಗೋಪಾಲ್ ಮಾತ್ರ ಉಳಿದುಕೊಂಡಿದ್ದಾರೆ. ಸಿಎಂ ಅಭ್ಯರ್ಥಿ ಅಂತಿಮಗೊಳಿಸುವ ಸಲುವಾಗಿ ಕೇರಳದ ಹಿರಿಯ ಕಾಂಗ್ರೆಸ್ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದ್ದು, ಮಂಗಳವಾರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಕಾಂಗ್ರೆಸ್ ಬೆಳವಣಿಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಿತ್ರ ಪಕ್ಷ ಐಯುಎಂಎಲ್, 8 ದಿನ ಕಳೆದರೂ ನೂತನ ಸಿಎಂ ಆಯ್ಕೆ ಮಾಡದಿರುವುದು ಈಗಾಗಲೇ ಕಾರ್ಯಕರ್ತರಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ, ಜೊತೆಗೆ, ಮುಂದೆ ವ್ಯತಿರಿಕ್ತ ಪರಿಣಾಮಗಳಿಗೂ ಕಾರಣವಾಗಬಹುದು ಎಂದು ಎಚ್ಚರಿಸಿದೆ.ಕೇರಳ ಬಿಕ್ಕಟ್ಟು:
ಕೇರಳ ವಿಧಾನಸಭೆಯ 140 ಸ್ಥಾನಗಳ ಪೈಕಿ ಯುಡಿಎಫ್ ಮೈತ್ರಿಕೂಟ 102 ಸ್ಥಾನ ಗೆದ್ದಿದೆ. ಈ ಪೈಕಿ ಕೂಟದ ನೇತೃತ್ವ ಹೊಂದಿರುವ ಕಾಂಗ್ರೆಸ್ 63 ಸ್ಥಾನ ಗೆದ್ದಿದ್ದು, ಸಿಎಂ ಸ್ಥಾನಕ್ಕಾಗಿ ವಿ.ಡಿ.ಸತೀಶನ್ ಮತ್ತು ಚೆನ್ನಿತ್ತಲ ನಡುವೆ ಭಾರೀ ಪೈಪೋಟಿ ಇತ್ತು. ಆದರೆ ರೇಸ್‌ಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಕೂಡ ಸೇರಿಕೊಂಡಿದ್ದು ಸ್ಪರ್ಧೆಯ ಕಾವನ್ನು ಹೆಚ್ಚಿಸಿದೆ.ಅಚ್ಚರಿ ಎಂಬಂತೆ ಇತ್ತೀಚೆಗೆ ವೀಕ್ಷಕರ ಸಮ್ಮುಖದಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ 45ಕ್ಕೂ ಹೆಚ್ಚು ಶಾಸಕರು ವೇಣುಗೋಪಾಲ್ ಅವರನ್ನೇ ಸಿಎಂ ಮಾಡಲು ಒಲವು ತೋರಿದ್ದರು. ಮತ್ತೊಂದೆಡೆ ರಾಹುಲ್ ಗಾಂಧಿ ಒಲವು ಕೂಡ ವೇಣು ಪರವೇ ಇದೆ.ಆದರೆ ಸತೀಶನ್ ಮತ್ತು ಚೆನ್ನಿತ್ತಲ, ಶಾಸಕರೇ ಅಲ್ಲದ ವೇಣು ಆಯ್ಕೆಗೆ ತೀವ್ರ ವಿರೋಧ ಹೊಂದಿದ್ದಾರೆ. ಆದರೆ ಸತತ 3 ದಿನಗಳ ಮನವೊಲಿಕೆ ಬಳಿಕ ಚೆನ್ನಿತ್ತಲ ತಣ್ಣಗಾಗಿದ್ದು, ಅವರೀಗ ಸಿಎಂ ರೇಸಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರಿಗೆ ವಿಧಾನಸಭೆ ಸ್ಪೀಕರ್ ಹುದ್ದೆ ನೀಡಲು ಪಕ್ಷ ಮುಂದಾಗಿದೆ ಎನ್ನಲಾಗಿದೆ.ಆದರೆ ಸತೀಶನ್ ಮಾತ್ರ ಸಿಎಂ ಹುದ್ದೆ ಬಿಟ್ಟು ಬೇರೆ ಯಾವುದಕ್ಕೂ ತಾವು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅವರ ಮನವೊಲಿಸುವ ಯತ್ನವನ್ನು ದಿಲ್ಲಿ ಕಾಂಗ್ರೆಸ್ ನಾಯಕರು ಮುಂದುವರೆಸಿದ್ದಾರೆ. ಜೊತೆಗೆ ನೂತನ ಸಿಎಂ ಹೆಸರು ಅಂತಿಮಗೊಳಿಸುವ ಮುನ್ನ ಕೇರಳ ಘಟಕದ ಹಲವು ಹಿರಿಯ ನಾಯಕರನ್ನು ದೆಹಲಿಗೆ ಕರೆಸಲಾಗಿದೆ. ಬುಧವಾರ ಅವರ ಜೊತೆ ರಾಹುಲ್ ಮತ್ತು ಖರ್ಗೆ ಮಾತುಕತೆ ನಡೆಸಿ ಸಿಎಂ ಅಭ್ಯರ್ಥಿ ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ.