ವಿದೇಶಿ ಮದ್ಯ ಸೇವನೆ: ತೆಲಂಗಾಣ ಗ್ರಾಮಸ್ಥರು ನಂ.1!

| Published : Aug 20 2025, 01:30 AM IST

ಸಾರಾಂಶ

ವಿದೇಶಿ ಮದ್ಯ ಮತ್ತು ಬಿಯರ್‌ಗಾಗಿ ವಾರ್ಷಿಕವಾಗಿ ಸರಾಸರಿ ತಲಾ 3,061 ರು.ಗಳನ್ನು ಖರ್ಚು ಮಾಡುವ ಮೂಲಕ ತೆಲಂಗಾಣದ ಗ್ರಾಮೀಣ ಪ್ರದೇಶದ ಜನರು ಅತಿ ಹೆಚ್ಚು ವೆಚ್ದದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ.

ಬೀಡಿಯಲ್ಲಿ ರಾಜಸ್ಥಾನದ ಹಳ್ಳಿಗರು ಟಾಪ್

ನವದೆಹಲಿ: ವಿದೇಶಿ ಮದ್ಯ ಮತ್ತು ಬಿಯರ್‌ಗಾಗಿ ವಾರ್ಷಿಕವಾಗಿ ಸರಾಸರಿ ತಲಾ 3,061 ರು.ಗಳನ್ನು ಖರ್ಚು ಮಾಡುವ ಮೂಲಕ ತೆಲಂಗಾಣದ ಗ್ರಾಮೀಣ ಪ್ರದೇಶದ ಜನರು ಅತಿ ಹೆಚ್ಚು ವೆಚ್ದದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ. ನಗರ ವಿಭಾಗದಲ್ಲಿ, 4232 ರು. ಖರ್ಚು ಮಾಡುವ ಮೂಲಕ ಸಿಕ್ಕಿಂ ಮೊದಲ ಸ್ಥಾನ ಪಡೆದಿದೆ ಎಂದು ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಯ ವರದಿ ತಿಳಿಸಿದೆ.

ವರದಿಯಲ್ಲಿ ಭಾರತದ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿ ದೇಶಿ ಮದ್ಯ, ವಿದೇಶಿ ಮದ್ಯ, ಬೀಡಿ, ಗುಟ್ಕಾ, ತಂಬಾಕಿನ ಎಲೆ ಹಾಗೂ ಸಿಗರೇಟ್ ಸೇವನೆಯ ತಲಾ ಖರ್ಚನ್ನು ಪ್ರತ್ಯೇಕವಾಗಿ ವಿವರಿಸಲಾಗಿದೆ.

ಗ್ರಾಮೀಣ ವಿಭಾಗದಲ್ಲಿ, ಬೀಡಿಗೆ ವಾರ್ಷಿಕ ಸರಾಸರಿ ತಲಾ 438 ರು.ಗಳನ್ನು ಖರ್ಚು ಮಾಡುವ ಮೂಲಕ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ಸಿಗರೇಟ್ ಸೇವನೆಯಲ್ಲಿ 1313 ರು. ಖರ್ಚು ಮಾಡುವ ಮಿಜೋರಾಂ, ಗುಟ್ಕಾ ಮತ್ತು ತಂಬಾಕಿನ ಎಲೆ ಸೇವನೆಯಲ್ಲಿ 792 ರು. ಖರ್ಚು ಮಾಡುವ ಮಧ್ಯಪ್ರದೇಶ, ದೇಶಿ ಮದ್ಯ ಸೇವನೆಯಲ್ಲಿ 1053 ರು. ಖರ್ಚಿನ ಮೂಲಕ ಛತ್ತೀಸಗಢ ಹಾಗೂ ವಿದೇಶಿ ಮದ್ಯ ಸೇವನೆಯಲ್ಲಿ 3061 ರು. ಖರ್ಚು ಮಾಡುವ ತೆಲಂಗಾಣ ಮೊದಲ ಸ್ಥಾನ ಪಡೆದಿವೆ.

ನಗರ ವಿಭಾಗದಲ್ಲಿ, ಬೀಡಿಗೆ ವಾರ್ಷಿಕ ಸರಾಸರಿ ತಲಾ 277 ರು.ಗಳನ್ನು ಖರ್ಚು ಮಾಡುವ ಮೂಲಕ ಹರ್ಯಾಣ ಮೊದಲ ಸ್ಥಾನದಲ್ಲಿದೆ. ಸಿಗರೇಟ್ ಸೇವನೆಯಲ್ಲಿ 1719 ರು. ಖರ್ಚು ಮಾಡುವ ಸಿಕ್ಕಿಂ, ಗುಟ್ಕಾ ಮತ್ತು ತಂಬಾಕಿನೆಲೆ ಸೇವೆನೆಯಲ್ಲಿ 735 ರು. ಖರ್ಚು ಮಾಡುವ ಮಧ್ಯಪ್ರದೇಶ, ದೇಶಿ ಮದ್ಯ ಸೇವನೆಯಲ್ಲಿ 694 ರು. ಖರ್ಚು ಮಾಡುವ ಮಣಿಪುರ ಹಾಗೂ ವಿದೇಶಿ ಮದ್ಯ ಸೇವನೆಯಲ್ಲಿ 4232 ರು. ಖರ್ಚು ಮಾಡುವ ಸಿಕ್ಕಿಂ ಮೊದಲ ಸ್ಥಾನ ಪಡೆದಿವೆ.