ಡಿಜಿಟಲ್‌ ವಂಚನೆ ಒಳಗಾದ ಮಾಸಿಕ 15000 ರು. ವೇತನ ಹೊಂದಿರುವ 3 ಕಾರ್ಮಿಕರಿಗೆ ₹45 ಕೋಟಿ ತೆರಿಗೆ ನೋಟಿಸ್‌ ಜಾರಿ

| N/A | Published : Apr 03 2025, 12:32 AM IST / Updated: Apr 03 2025, 07:17 AM IST

ಸಾರಾಂಶ

ಮಾಸಿಕ 15000 ರು. ಆಸುಪಾಸು ವೇತನ ಹೊಂದಿರುವ ಉತ್ತರಪ್ರದೇಶದ ಮೂವರು ಕಾರ್ಮಿಕರಿಗೆ ಆದಾಯ ತರಿಗೆ ಇಲಾಖೆ ಒಟ್ಟು 45 ಕೋಟಿ ರು. ತೆರಿಗೆ ಪಾವತಿಸುವಂತೆ ನೋಟಿಸ್‌ ಜಾರಿ ಮಾಡಿದೆ. ಇದನ್ನು ನೋಡಿ ಕಾರ್ಮಿಕರು ಆಘಾತಕ್ಕೆ ತುತ್ತಾಗಿದ್ದಾರೆ.

ಆಲಿಗಢ: ಮಾಸಿಕ 15000 ರು. ಆಸುಪಾಸು ವೇತನ ಹೊಂದಿರುವ ಉತ್ತರಪ್ರದೇಶದ ಮೂವರು ಕಾರ್ಮಿಕರಿಗೆ ಆದಾಯ ತರಿಗೆ ಇಲಾಖೆ ಒಟ್ಟು 45 ಕೋಟಿ ರು. ತೆರಿಗೆ ಪಾವತಿಸುವಂತೆ ನೋಟಿಸ್‌ ಜಾರಿ ಮಾಡಿದೆ. ಇದನ್ನು ನೋಡಿ ಕಾರ್ಮಿಕರು ಆಘಾತಕ್ಕೆ ತುತ್ತಾಗಿದ್ದಾರೆ.

ಘಟನೆ ಕುರಿತು ಪ್ರಾಥಮಿಕ ತನಿಖೆ ನಡೆಸಿದ ವೇಳೆ ಮೂವರು ಕಾರ್ಮಿಕರ ಆಧಾರ್‌ ಕಾರ್ಡ್‌, ಪಾನ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಯನ್ನು ಕೆಲ ಖಾಸಗಿ ಕಂಪನಿಗಳು ದುರ್ಬಳಕೆ ಮಾಡಿಕೊಂಡು ಅದರ ಮೂಲಕ ವಹಿವಾಟು ನಡೆಸಿದ್ದು ಗೊತ್ತಾಗಿದೆ. ಹೀಗಾಗಿ ಆ ಕಂಪನಿಗಳು ನಡೆಸಿದ ವಹಿವಾಟಿಗಾಗಿ ಕಾರ್ಮಿಕರಾದ ಕಿರಣ್‌ ಕುಮಾರ್‌ಗೆ 33.88 ಕೋಟಿ ರು., ಮೋಹಿತ್‌ ಕುಮಾರ್‌ಗೆ 3.87 ಕೋಟಿ ರು., ಅಮಿತ್‌ಗೆ 7.79 ಕೋಟಿ ರು. ನೋಟಿಸ್‌ ಅನ್ನು ಮಾರ್ಚ್‌ನಲ್ಲಿ ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.