ಮಧ್ಯಪ್ರದೇಶ : ಚಿಂದಿ ಆಯುವ ಮಹಿಳೆಗೆ ಮದ್ಯ ಕುಡಿಸಿ ಫುಟ್‌ಪಾತ್‌ನಲ್ಲೇ ಅತ್ಯಾಚಾರ ಎಸಗಿದ ಭೀಕರ ಘಟನೆ

| Published : Sep 07 2024, 01:33 AM IST / Updated: Sep 07 2024, 04:33 AM IST

ಸಾರಾಂಶ

ಚಿಂದಿ ಆಯುವ ಯುವತಿಗೆ ಮದ್ಯ ಕುಡಿಸಿ ಫಟ್‌ಪಾತ್‌ನಲ್ಲೇ ಯುವಕನೊಬ್ಬ ಅತ್ಯಾಚಾರ ಎಸಗಿದ ಭೀಕರ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

ಉಜ್ಜಯಿನಿ (ಮ.ಪ್ರ): ಚಿಂದಿ ಆಯುವ ಯುವತಿಗೆ ಮದ್ಯ ಕುಡಿಸಿ ಫಟ್‌ಪಾತ್‌ನಲ್ಲೇ ಯುವಕನೊಬ್ಬ ಅತ್ಯಾಚಾರ ಎಸಗಿದ ಭೀಕರ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. 

ಈ ಘಟನೆಯನ್ನು ಕೆಲವು ದಾರಿಹೋಕರು, ಕೃತ್ಯ ತಡೆಯುವ ಬದಲು ಅದನ್ನು ಚಿತ್ರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದಾರೆ. ಈಗ ಸಂತ್ರಸ್ತೆ ದೂರಿನ ನಂತರ ಅತ್ಯಾಚಾರಿ ಲೋಕೇಶ್‌ ಎಂಬಾತನನ್ನು ಬಂಧಿಸಿದ್ದಾರೆ.

ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ವ್ಯಕ್ತಿ ಮಹಿಳೆಗೆ ಮದ್ಯ ಕುಡಿಸಿ ನಂತರ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಮಾತನಾಡದಂತೆ ಆಕೆಗೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದ. ಮದ್ಯದ ಪರಿಣಾಮ ಕಡಿಮೆಯಾದಾಗ ಮಹಿಳೆ ದೂರು ನೀಡಿದ ನಂತರ, ಲೋಕೇಶ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕೃತ್ಯವನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ತೀವ್ರವಾಗಿ ಖಂಡಿಸಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.