ಸಾರಾಂಶ
ಹರ್ಯಾಣದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಕಾಪಿಚೀಟಿ ರವಾನಿಸಲು ಕಟ್ಟಡದ ಮೇಲಂತಸ್ತುಗಳಿಗೆ ಹಗ್ಗಕಟ್ಟಿ ರವಾನಿಸಿದ ಘಟನೆ ವರದಿಯಾಗಿದೆ.
ನೂಹ್: ಹತ್ತನೇ ತರಗತಿಯ ದೈಹಿಕ ಶಿಕ್ಷಣದ ಪ್ರಾಯೋಗಿಕ ಪರೀಕ್ಷೆಯ ವೇಳೆ ನಗರದ ಚಂದ್ರಾವತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಕೆಲವರು ಹೊರಗಿನಿಂದ ಹಗ್ಗ ಕಟ್ಟಿಕೊಂಡು ಮೇಲಕ್ಕೆ ಬಂದು ಕಾಪಿಚೀಟಿ ರವಾನಿಸಿದ ದೃಶ್ಯಗಳು ವೈರಲ್ ಆಗಿವೆ.ಪರೀಕ್ಷೆ ಆರಂಭವಾದ ಬಳಿಕ ಯಾರೋ ಒಬ್ಬರು ಪ್ರಶ್ನೆಪತ್ರಿಕೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕೂಡಲೇ ಹಲವರ ಗುಂಪು ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಅದನ್ನು ತಮ್ಮ ಪರೀಕ್ಷಾರ್ಥಿಗಳಿಗೆ ತಲುಪಿಸಲು ಹಗ್ಗ ಕಟ್ಟಿಕೊಂಡು ಜಿಮ್ನಾಸ್ಟ್‌ಗಳ ರೀತಿಯಲ್ಲಿ ಕಟ್ಟಡ ಏರಿದ ದೃಶ್ಯಗಳನ್ನು ಮತ್ತೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಸಾಕ್ಷರತಾ ಅಧಿಕಾರಿ ಪ್ರತಿಕ್ರಿಯಿಸಿ ಪ್ರಶ್ನೆಪತ್ರಿಕೆಯಲ್ಲಿ ಅನನ್ಯ ಸಂಕೇತವಿದ್ದು, ಆ ಮೂಲಕ ಯಾರಿಗೆ ವಿತರಿಸಲಾದ ಪ್ರಶ್ನೆಪತ್ರಿಕೆಯಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.