ಸಾರಾಂಶ
ಬುಡಕಟ್ಟು ಜೋಡಿಯೊಂದು ಸಮುದಾಯದ ಸಂಪ್ರದಾಯಗಳಿಗೆ ವಿರುದ್ಧವಾಗಿ ಮದುವೆ ಆಗಿದೆ ಎಂಬ ಆರೋಪ ಹೊರಿಸಿ ಅವರಿಗೆ ನೊಗ ಹೊರುವ ಶಿಕ್ಷೆ ನೀಡಿದ ಅಮಾನವೀಯ ಘಟನೆ ನಡೆದಿದೆ.
ಭುವನೇಶ್ವರ: ಒಡಿಶಾದ ರಾಯಗಡ ಜಿಲ್ಲೆಯ ಬುಡಕಟ್ಟು ಜೋಡಿಯೊಂದು ಸಮುದಾಯದ ಸಂಪ್ರದಾಯಗಳಿಗೆ ವಿರುದ್ಧವಾಗಿ ಮದುವೆ ಆಗಿದೆ ಎಂಬ ಆರೋಪ ಹೊರಿಸಿ ಅವರಿಗೆ ನೊಗ ಹೊರುವ ಶಿಕ್ಷೆ ನೀಡಿದ ಅಮಾನವೀಯ ಘಟನೆ ನಡೆದಿದೆ. ಬಳಿಕ ಆ ಜೋಡಿಗೆ ಊರು ಬಿಡುವಂತೆಯೂ ಗ್ರಾಮಸ್ಥರು ಸೂಚಿಸಿದ್ದಾರೆ.
ಕಲ್ಯಾಣ್‌ಸಿಂಗ್‌ಪುರ ಪೊಲೀಸ್ ವ್ಯಾಪ್ತಿಯ ಕಂಜಮಜೋಡಿ ಗ್ರಾಮದಲ್ಲಿ ರಕ್ತಸಂಬಂಧಿಕರಲ್ಲೇ ಮದುವೆ ಆಗಲು ನಿಷೇಧವಿದೆ. ಹೀಗೆ ಆದರೆ ಮಳೆ-ಬೆಳೆ ಬರಲ್ಲ ಎಂಬ ಮೂಢನಂಬಿಕೆ ಇದೆ.
ಆದರೆ ಈ ನಿಯಮದ ವಿರುದ್ಧ ಇತ್ತೀಚಗೆ ಯುವಕ-ಯುವತಿ ಮದುವೆ ಆಗಿದ್ದರು. ಹೀಗಾಗಿ ಗ್ರಾಮಸ್ಥರು ಇವರಿಗೆ ಸಾರ್ವಜನಿಕ ಶಿಕ್ಷೆ ನೀಡಿದ್ದು, ಹೆಗಲ ಮೇಲೆ ನೊಗ ಹಾಕಿಕೊಂಡು ಹೊಲವನ್ನು ಉಳುಮೆ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದರಿಂದ ಗ್ರಾಮ ಶುದ್ಧಿ ಆಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರಿ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.