ಸಾರಾಂಶ
ಇಲ್ಲಿನ ಶಾಹಿ ಜಾಮಾ ಮಸೀದಿ ಸಮೀಕ್ಷೆಯ ವಿಸ್ತೃತ ವರದಿಯನ್ನು ಇದೀಗ ಚಂಡೌಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಆ ಜಾಗದಲ್ಲಿ ಮಂದಿರ ಇದ್ದುದಕ್ಕೆ ಸಾಕ್ಷಿ ಲಭಿಸಿದೆ ಎಂದು ಮೂಲಗಳು ತಿಳಿಸಿವೆ.
ಸಂಭಲ್: ಇಲ್ಲಿನ ಶಾಹಿ ಜಾಮಾ ಮಸೀದಿ ಸಮೀಕ್ಷೆಯ ವಿಸ್ತೃತ ವರದಿಯನ್ನು ಇದೀಗ ಚಂಡೌಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಆ ಜಾಗದಲ್ಲಿ ಮಂದಿರ ಇದ್ದುದಕ್ಕೆ ಸಾಕ್ಷಿ ಲಭಿಸಿದೆ ಎಂದು ಮೂಲಗಳು ತಿಳಿಸಿವೆ. ‘ಕೋರ್ಟ್ ನಿರ್ದೇಶನದಂತೆ ನ.19 ಹಾಗೂ ನ.24ರಂದು ಮಸೀದಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅದರ ಎಲ್ಲಾ ಕೋನಗಳ ವಿಡಿಯೋ ಸೆರಿದಂತೆ 40-45 ಪುಟಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಿವಿಲ್ ನ್ಯಾಯಾಧೀಶರಿಗೆ ಸಲ್ಲಿಸಲಾಗಿದೆ’ ಎಂದು ಪ್ರಕರಣದ ವಕೀಲರಾಗಿರುವ ರಮೇಶ್ ಸಿಂಗ್ ರಾಘವ್ ತೀಳಿಸಿದ್ದಾರೆ.
ಪ್ರಸ್ತುತ ಇರುವ ಮುಘಲರ ಕಾಲದ ಜಾಮಾ ಮಸೀದಿಯ ಸ್ಥಳದಲ್ಲಿ ಮೊದಲು ಹರಿಹರ ದೇವಸ್ಥಾನ ಇತ್ತು ಎನ್ನಲಾಗಿದ್ದು, ಆ ಕುರಿತ ಸಮೀಕ್ಷೆ ನಡೆಸಿ ಅದರ ವರದಿಯನ್ನು ಬಹಿರಂಗಪಡಿಸದಂತೆ ಕೋರ್ಟ್ ಆದೇಶಿಸಿತ್ತು. ಅದರಂತೆ ಸಮೀಕ್ಷೆ ನಡೆಯುತ್ತಿದ್ದ ವೇಳೆ ಅದನ್ನು ವಿರೋಧಿಸಿದ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಘಟನೆಯಲ್ಲಿ 4 ಜನ ಸಾವನ್ನಪ್ಪಿದ್ದು, ಪೊಲೀಸರು ಸೇರಿ ಹಲವರು ಗಾಯಗೊಂಡಿದ್ದರು.ಇದೀಗ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ಆ ಸ್ಥಳದಲ್ಲಿ ದೇವಸ್ಥಾನವಿದ್ದ ಬಗ್ಗೆ ಸಾಕ್ಷಿಗಳು ದೊರಕಿವೆ ಎನ್ನಲಾಗಿದೆ.