ಸಾರಾಂಶ
ನ್ಯಾಯಾಲಯದ ಅನುಮತಿ ಪಡೆಯದೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಪೆರೋಲ್ ನೀಡಬಾರದು ಎಂದು ಆದೇಶಿಸಿದೆ.
ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ವಿವಾದಿತ ಡೇರಾ ಸಚ್ಚಾ ಸೌದಾ ಪಂಥದ ಧರ್ಮಗುರು ಗುರ್ಮೀತ್ ರಾಂ ರಹೀಂಗೆ ನ್ಯಾಯಾಲಯದ ಅನುಮತಿ ಇಲ್ಲದೇ ಪರೋಲ್ ನೀಡುವಂತಿಲ್ಲ ಎಂದು ಪಂಜಾಬ್ ಹರ್ಯಾಣ ಹೈಕೋರ್ಟ್ ಆದೇಶ ನೀಡಿದೆ.
ಪದೇ ಪದೇ ಆತನಿಗೆ ಪರೋಲ್ ಪ್ರಶ್ನಿಸಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ,‘ರಾಮ್ ರಹೀಂ ಒಂದು ವರ್ಷದಲ್ಲಿ ಈಗಾಗಲೇ 91 ದಿನಗಳ ಪೆರೋಲ್ ಪಡೆದುಕೊಂಡಿದ್ದಾರೆ. ಜೊತೆಗೆ ಈಗಾಗಲೇ 9 ಬಾರಿ ಪರೋಲ್ ಜಾರಿಯಾಗಿದೆ. ಇವರನ್ನು ಮಾ.10ರಂದು ವಿಚಾರಣೆಗೆ ಹಾಜರುಪಡಿಸಬೇಕು. ಜೊತೆಗೆ ಎಷ್ಟು ಮಂದಿ ಈ ರೀತಿಯ ಪೆರೋಲ್ ಮೇಲೆ ಹೊರಬಂದಿದ್ದಾರೆ ಎಂದು ಮಾಹಿತಿ ನೀಡಬೇಕು. ಮುಂದೆ ಪೆರೋಲ್ ಕೊಡುವ ಮುನ್ನ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕು’ ಎಂದು ಹರ್ಯಾಣ ಸರ್ಕಾರಕ್ಕೆ ಆದೇಶಿಸಿದೆ.