ಸಾರಾಂಶ
ಅಜಿತ್ ಪವಾರ್ ಬಣದ 41 ಶಾಸಕರ ಅನರ್ಹತೆ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಮುಂಬೈ: ಕಳೆದ ವರ್ಷ ಜೂನ್‌ನಲ್ಲಿ ಶರದ್ ಪವಾರ್ ವಿರುದ್ಧ ಬಂಡಾಯವೆದ್ದ ಅಜಿತ್ ಪವಾರ್ ಬಣದ 41 ಎನ್‌ಸಿಪಿ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಗುರುವಾರ ತಿರಸ್ಕರಿಸಿದ್ದಾರೆ. ಅಜಿತ್ ಬಣವೇ ನಿಜವಾದ ಎನ್‌ಸಿಪಿ ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಜೊತೆಗೂಡಿದ ಶಾಸಕರು ‘ಪಕ್ಷದ ಇಚ್ಛೆ’ಯಂತೆ ಬಿಜೆಪಿ-ಶಿಂಧೆ ಶಿವಸೇನೆ ಸರ್ಕಾರ ಸೇರಿಕೊಂಡಿದ್ದಾರೆ. ಅಜಿತ್ ಪವಾರ್ 41 ಶಾಸಕರನ್ನ ತಮ್ಮ ಜತೆ ಹೊಂದಿದ್ದು, ಅವರ ಬಳಿ ಬಹುಮತವಿದೆ. ಹೀಗಾಗಿ ಅವರನ್ನು ಅನರ್ಹ ಮಾಡಲಾಗದು’ ಎಂದು ನಾರ್ವೇಕರ್ ಹೇಳಿದ್ದಾರೆ ಹಾಗೂ ಅನರ್ಹತೆ ಕೋರಿದ್ದ ಶರದ್ ಪವಾರ್ ಬಣದ ಅರ್ಜಿ ತಿರಸ್ಕರಿಸಿದ್ದಾರೆ.ವಿಭಜನೆಗೂ ಮುನ್ನ ಎನ್‌ಸಿಪಿ 53 ಶಾಸಕರನ್ನು ಹೊಂದಿತ್ತು. ವಿಭಜನೆ ಬಳಿಕ ಅಜಿತ್ ಬಣ 41 ಹಾಗೂ ಶರದ್ ಬಣ 12 ಶಾಸಕರನ್ನು ಹೊಂದಿವೆ.