ಬಿಜೆಪಿ ಅಭ್ಯರ್ಥಿಯಿಂದ ದೇಗುಲ ಚಿತ್ರ ದುರ್ಬಳಕೆ: ಸಿಪಿಎಂ ದೂರು

| Published : Mar 26 2024, 01:23 AM IST

ಸಾರಾಂಶ

ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ವಿ. ಮುರಳೀಧರನ್‌ ಪ್ರಸಿದ್ಧ ಹಿಂದೂ ದೇವಾಲಯದ ಚಿತ್ರಗಳನ್ನು ಬ್ಯಾನರ್‌ನಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬುಧವಾರ ಕೇರಳದ ಸಿಪಿಎಂ ಪಕ್ಷ ಆರೋಪಿಸಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ತಿರುವನಂತಪುರ: ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ವಿ. ಮುರಳೀಧರನ್‌ ಪ್ರಸಿದ್ಧ ಹಿಂದೂ ದೇವಾಲಯದ ಚಿತ್ರಗಳನ್ನು ಬ್ಯಾನರ್‌ನಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬುಧವಾರ ಕೇರಳದ ಸಿಪಿಎಂ ಪಕ್ಷ ಆರೋಪಿಸಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಕೇರಳದ ದಕ್ಷಿಣ ಭಾಗದ ಅತ್ತಿಂಗಲ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮುರಳೀಧರನ್‌ ಅವರು ಚುನಾವಣೆ ಪ್ರಚಾರಕ್ಕೆಂದು ಮಾಡಿಸಿರುವ ಬ್ಯಾನರ್‌ನಲ್ಲಿ ತಮ್ಮ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೋಟೊ ಜೊತೆಗೆ ಪ್ರಸಿದ್ಧ ಹಿಂದೂ ದೇಗುಲವಾದ ಜನಾರ್ಧನ ಸ್ವಾಮಿ ದೇಗುಲದ ಫೋಟೊಗಳನ್ನು ಬಳಸಿಕೊಂಡಿದ್ದಾರೆ. ಇದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಮುರಳೀಧರನ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಪಿಎ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.